ನಾರಾಯಣ ಗುರುಗಳ ಬಗ್ಗೆ ಎಲ್ಲರಿಗೂ ಅಭಿಮಾನ ಇದೆ: ಸಚಿವ ಎಸ್.ಅಂಗಾರ
ಉಡುಪಿ: ನಾರಾಯಣ ಗುರುಗಳ ಬಗ್ಗೆ ದೇಶದಲ್ಲಿ ಎಲ್ಲರಿಗೂ ಅಭಿಮಾನ ಇದೆ. ನಾರಾಯಣ ಗುರುಗಳ ವಿಚಾರದಲ್ಲಿ ರಾಜಕೀಯ ದೃಷ್ಟಿಕೋನಗಳು ಪ್ರತಿಭಟನೆ ಮಾಡುವುದು ಸರಿಯಲ್ಲ. ಇದಕ್ಕೆ ನನ್ನ ವಿರೋಧ ಇದೆ ಎಂದು ಮೀನುಗಾರಿಕಾ ಬಂದರು ಸಚಿವ ಎಸ್.ಅಂಗಾರ ಹೇಳಿದ್ದಾರೆ.
ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಈ ಬೆಳವಣಿಗೆ ವಿರುದ್ಧ ಇಂದು ಕರಾವಳಿಯಯಲ್ಲಿ ಸ್ವಾಭಿಮಾನ ನಡಿಗೆ ನಡೆಯುತ್ತಿದೆ. ನಾರಾಯಣ ಗುರುಗಳ ಬಗ್ಗೆ ಯಾರಿಗೂ ಗೌರವ ಕಡಿಮೆಯಾಗಿಲ್ಲ. ಗುರುಗಳು ಸಮಾಜಕ್ಕೆ ಪ್ರಮುಖರು. ಇತಿಹಾಸದಲ್ಲಿ ಅವರ ಎಲ್ಲ ವಿಚಾರವನ್ನು ಎಲ್ಲರೂ ಒಪ್ಪುವಂಥದ್ದು. ಈ ಹಿಂದೆ ಈ ವಿಚಾರಗಳು ಯಾಕೆ ಚರ್ಚೆಯಾಗಿಲ್ಲ? ಈಗ ರಾಜಕೀಯಕ್ಕೆ ಇಳಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.
ಈ ಎಲ್ಲವನ್ನು ಆಲೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರಧಾನಿ ನರೇಂದ್ರ ಮೋದಿಗೆ ನಮಗೆ ಮತ್ತು ನಮ್ಮ ಸಂಘಟನೆಗೆ ನಾರಾಯಣ ಗುರುಗಳ ಬಗ್ಗೆ ಗೌರವವಿದೆ. ನಾರಾಯಣ ಗುರುಗಳ ವಿಚಾರದಲ್ಲಿ ಮುಂದೆ ಏನೇನು ಮಾಡಬೇಕು ಇದನ್ನು ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಾಪತ್ತೆಯಾಗಿದ್ದ ಯುವಕನ ಬಿಡುಗಡೆಗೆ ಚೀನಾ ಒಪ್ಪಿಗೆ: ಕೇಂದ್ರ ಸಚಿವ ಕಿರಣ್ ರಿಜಿಜು
ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹ ಕಟ್ಟಿ ಎಸೆದ ಆರೋಪಿಗಳ ಬಂಧನ
ಮಾನವ ಕಳ್ಳಸಾಗಣೆ: 41 ಆರೋಪಿಗಳಿಗೆ ಕಠಿಣ ಶಿಕ್ಷೆ
ಅಪಘಾತದಲ್ಲಿ ಮರ್ಮಾಂಗ ಊನಗೊಂಡ ಯುವಕನಿಗೆ 17.66 ಲಕ್ಷ ರೂ. ಪರಿಹಾರ
ಬೆತ್ತಲೆ ಗ್ಯಾಂಗ್ ಬ್ಲಾಕ್ ಮೇಲ್: ರೈಲಿಗೆ ತಲೆ ಕೊಟ್ಟು ಇಂಜಿನಿಯರ್ ಆತ್ಮಹತ್ಯೆಗೆ ಶರಣು