ನಾರಾಯಣ ಗುರುಗಳ ಸ್ತಬ್ಧಚಿತ್ರ ವಿವಾದ : ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಸ್ತಬ್ಧಚಿತ್ರ ವಿವಾದ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಬಿಜೆಪಿ ನಾಯಕರು ವಿವಿಧ ಹೇಳಿಕೆಗಳ ಮೂಲಕ ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇರಳದ ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆಗೆ ಅಲಿಖಿತ ಪೂರ್ವನಿದರ್ಶನ ಕಾರಣ ಎಂದು ಹೇಳಿರುವ ಸಚಿವ ಪ್ರಹ್ಲಾದ ಜೋಷಿಯವರು ಹೇಳಿಕೆ ನೀಡುವ ಮೊದಲು ದೃಢಪಡಿಸಿಕೊಳ್ಳಬೇಕಿತ್ತು ಎಂದು ನನಗೆ ಪುಕ್ಕಟೆ ಸಲಹೆ ನೀಡಿದ್ದಾರೆ. ದಯವಿಟ್ಟು ಅವರು ಈ ಅಲಿಖಿತ ಪೂರ್ವನಿದರ್ಶನ ಏನು ಎನ್ನುವುದನ್ನು ಸ್ಪಷ್ಟಪಡಿಬೇಕು. 3 ವರ್ಷಗಳಿಗೊಮ್ಮೆ ಮಾತ್ರ ಸ್ತಬ್ಧಚಿತ್ರಕ್ಕೆ ರಾಜ್ಯಗಳಿಗೆ ಅವಕಾಶ ಎನ್ನುತ್ತಾರೆ ರಾಜ್ಯದ ಇಬ್ಬರು ಸಚಿವರು, ಅಲಿಖಿತ ಪೂರ್ವನಿದರ್ಶನ ಇದೆ ಎನ್ನುತ್ತಾರೆ ಕೇಂದ್ರ ಸಚಿವರು, ಕೇರಳ ಸರ್ಕಾರವೇ ನಾರಾಯಣಗುರು ವಿರೋಧಿ ಎನ್ನುತ್ತಾರೆ ಬಿಜೆಪಿ ವಕ್ತಾರರು. ಇದರಲ್ಲಿ ಯಾವುದು ನಿಜ ಎನ್ನುವುದನ್ನು ಪ್ರಧಾನಿ ಮೋದಿಯವರೇ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆ 3 ವರ್ಷಗಳಿಗೊಮ್ಮೆ ಮಾತ್ರ ರಾಜ್ಯಗಳಿಗೆ ಅವಕಾಶ ಎಂದಾದರೆ ನಮ್ಮ ಕರ್ನಾಟಕಕ್ಕೆ ಸತತ 13ನೇ ಬಾರಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಹೇಗೆ ನೀಡಲಾಯಿತು? ಎನ್ನುವುದನ್ನು ಸಚಿವರಾದ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ತಿಳಿಸಬೇಕು. ಇಂತಹ ಹಸಿ ಸುಳ್ಳುಗಳು ಸಚಿವರಿಗೆ ಶೋಭೆ ತರುವುದಿಲ್ಲ. ಕೇರಳ ಸರ್ಕಾರ ಪ್ರಸ್ತುತ ಪಡಿಸಿದ್ದ ಜಟಾಯು ಸ್ತಬ್ಧಚಿತ್ರಕ್ಕೆ ಒಪ್ಪಿಗೆ ನೀಡದೆ, ಅದರ ಮುಂದೆ ಶಂಕರಾಚಾರ್ಯರ ಪ್ರತಿಕೃತಿಯನ್ನು ಕೂರಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರಲು ಕಾರಣ ಏನು? ಕೇರಳ ಸರ್ಕಾರ ಸೂಚಿಸಿದ ನಾರಾಯಣ ಗುರುಗಳ ಪ್ರತಿಕೃತಿಯನ್ನು ನಿರಾಕರಿಸಲು ಕಾರಣ ಏನು? ಕೇಂದ್ರ ಬಿಜೆಪಿ ಸರ್ಕಾರ ಇದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಂಗಳೂರು: ತ್ಯಾಜ್ಯ ವಿಲೇವಾರಿ ವಿಳಂಬ; ಪಾಲಿಕೆ ಆಯುಕ್ತರಿಗೆ ಹೈಕೋರ್ಟ್ ಎಚ್ಚರಿಕೆ
ಕೋವಿಡ್ ಲಸಿಕೆ ಸಾವು ತಪ್ಪಿಸುತ್ತದೆಯೇ ಹೊರತು ಸೋಂಕು ಬರುವುದನ್ನಲ್ಲ: ಸಚಿವ ಡಾ. ಸುಧಾಕರ್
ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ
ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಹೈಕೋಟ್‌ನಿಂದ ಆರೋಪಿಯ ಜಾಮೀನು ಅರ್ಜಿ ವಜಾ
ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ