ಕೊಲೆ ಆರೋಪ: ನಟಿ ನರ್ಗಿಸ್ ಫಕ್ರಿಯ ಸಹೋದರಿ ಆಲಿಯಾ ಫಕ್ರಿ ಬಂಧನ

03/12/2024

ನ್ಯೂಯಾರ್ಕ್ ನ ಕ್ವೀನ್ಸ್‌ನಲ್ಲಿ ಸಂಭವಿಸಿದ ಘಟನೆಯೊಂದರಲ್ಲಿ ತನ್ನ ಮಾಜಿ ಗೆಳೆಯ ಎಡ್ವರ್ಡ್ ಜೇಕಬ್ಸ್ ಮತ್ತು ಅವನ ಸ್ನೇಹಿತ ಅನಸ್ತಾಸಿಯಾ ಸ್ಟಾರ್ ಎಟಿಯೆನ್ ಅವರನ್ನು ಕೊಂದ ಆರೋಪದ ಮೇಲೆ ರಾಕ್ ಸ್ಟಾರ್ ಖ್ಯಾತಿಯ ನರ್ಗಿಸ್ ಫಕ್ರಿ ಅವರ ಸಹೋದರಿ ಆಲಿಯಾ ಫಕ್ರಿ ಅವರನ್ನು ಬಂಧಿಸಲಾಗಿದೆ.

ಆದರೆ ಆಕೆಯ ತಾಯಿ ಈ ಆರೋಪವನ್ನು ನಿರಾಕರಿಸಿದ್ದಾರೆ. ತಾಯಿ ಹೇಳಿದ್ದನ್ನು ಡೈಲಿ ನ್ಯೂಸ್ ಉಲ್ಲೇಖಿಸಿದೆ, “ಅವಳು ಯಾರನ್ನಾದರೂ ಕೊಲ್ಲುತ್ತಾಳೆ ಎಂದು ನಾನು ಭಾವಿಸುವುದಿಲ್ಲ. ಅವಳು ಎಲ್ಲರನ್ನೂ ನೋಡಿಕೊಳ್ಳುವ ವ್ಯಕ್ತಿಯಾಗಿದ್ದಳು. ಅವಳು ಎಲ್ಲರಿಗೂ ಸಹಾಯ ಮಾಡಲು ಪ್ರಯತ್ನಿಸಿದಳು” ಎಂದಿದ್ದಾರೆ.

43 ವರ್ಷದ ಆಲಿಯಾ ಫಕ್ರಿ ಉದ್ದೇಶಪೂರ್ವಕವಾಗಿ ಎರಡು ಅಂತಸ್ತಿನ ಗ್ಯಾರೇಜ್ ಗೆ ಬೆಂಕಿ ಹಚ್ಚಿದ್ದು, ಇದು ತನ್ನ 35 ವರ್ಷದ ಮಾಜಿ ಗೆಳೆಯ ಮತ್ತು ಅನಸ್ತಾಸಿಯಾ ಎಟ್ಟಿಯೆನ್ (33) ಸಾವಿಗೆ ಕಾರಣವಾಯಿತು ಎಂದು ಜಿಲ್ಲಾ ಅಟಾರ್ನಿ ಮೆಲಿಂಡಾ ಕಾಟ್ಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ 2 ರಂದು ಮುಂಜಾನೆ ಗ್ಯಾರೇಜ್ ಗೆ ಆಗಮಿಸಿದ ನಂತರ ಆಲಿಯಾ ಫಕ್ರಿ ‘ನೀವೆಲ್ಲರೂ ಇಂದು ಸಾಯಲಿದ್ದೀರಿ’ ಎಂದು ಕೂಗಿದ್ದಾಳೆ. ಆಕೆಯ ಧ್ವನಿಯನ್ನು ಕೇಳಿದ ವ್ಯಕ್ತಿಯೊಬ್ಬರು ಹೊರಗೆ ಬಂದು ನೋಡಿದಾಗ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡುಕೊಂಡರು ಎಂದು ಜಿಲ್ಲಾ ಅಟಾರ್ನಿ ಮೆಲಿಂಡಾ ಕಾಟ್ಜ್ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version