ತಮ್ಮವರನ್ನು ಉಳಿಸಿಕೊಳ್ಳಲು ಸತ್ತವರ ಆಕ್ಸಿಜನ್ ಸಿಲಿಂಡರ್ ಕಿತ್ತುಕೊಂಡ ಕುಟುಂಬಸ್ಥರು!

ನಾಸಿಕ್: ಇಲ್ಲಿನ ಡಾ.ಝಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ 24 ಮಂದಿ ರೋಗಿಗಳು ಸಾವನ್ನಪ್ಪಿದ ಘಟನೆ ನಡೆದಿತ್ತು. ಈ ಘಟನೆಯ ವೇಳೆ ಜನರು ತಮ್ಮ ಕುಟುಂಬಸ್ಥರನ್ನು ಉಳಿಸಿಕೊಳ್ಳಲು ಸತ್ತವರ ಆಕ್ಸಿಜನ್ ಸಿಲಿಂಡರ್ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ.
23 ವರ್ಷ ವಯಸ್ಸಿನ ವಿಕ್ಕಿ ಜಾಧವ್ ಎಂಬವರು ತಮ್ಮ ಅಜ್ಜಿಯನ್ನು ಆಸ್ಪತ್ರೆಯಲ್ಲಿ ನೋಡಿಕೊಂಡಿದ್ದರು. 65 ವರ್ಷ ವಯಸ್ಸಿನ ಅಜ್ಜಿ ಸುಗಂಧ ಥೋರಥ್ ಅವರನ್ನು ನೋಡಿಕೊಳ್ಳುತ್ತಿದ್ದ ವೇಳೆಯಲ್ಲಿಯೇ ಆಕ್ಸಿಜನ್ ಲೀಕ್ ಆಗಿರುವ ವಿಚಾರ ಅವರಿಗೆ ತಿಳಿದು ಬಂದಿದೆ. ಆಕ್ಸಿಜನ್ ಸೋರಿಕೆ ಆಗಿ 1 ಗಂಟೆಯೊಳಗೆ ತನ್ನ ಅಜ್ಜಿ ಸೇರಿದಂತೆ 24 ರೋಗಿಗಳು ಸಾಯುವುದನ್ನು ವಿಕ್ಕಿ ಕಣ್ಣಾರೆ ಕಂಡಿದ್ದಾರೆ.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಇತರ ರೋಗಿಗಳ ಸಂಬಂಧಿಕರು ಓಡಿಕೊಂಡು ಬಂದಿದ್ದು, ಸತ್ತವರ ಆಕ್ಸಿಜನ್ ಸಿಲಿಂಡರ್ ಕಿತ್ತು ತನ್ನಿ ಎಂದು ಬೊಬ್ಬಿಡುತ್ತಿರುವುದು ಕೇಳಿ ಬಂದಿದೆ. ಈ ಆಕ್ಸಿಜನ್ ನಿಂದ ತಮ್ಮವರನ್ನು ಉಳಿಸಿಕೊಳ್ಳಬೇಕು ಎಂದು ಅವರು ಹೇಳುತ್ತಿದ್ದರು. ಅವರ ಆತಂಕ ನೋವನ್ನು ಕೇಳಲು ಕಷ್ಟಕರವಾಗಿತ್ತು ಎಂದು ವಿಕ್ಕಿ ಹೇಳಿದ್ದಾರೆ.
Oxygen Tank Leaked at Nashik Hospital. pic.twitter.com/R5OuBwwMrX
— Shivangi Thakur (@thakur_shivangi) April 21, 2021