ಬ್ರಾಹ್ಮಣ ವಾದದ ವಿರುದ್ಧ ಹೇಳಿಕೆ: ವಿಚಾರಣೆ ಎದುರಿಸಿ ನಟ ಚೇತನ್ ಹೇಳಿದ್ದೇನು?
16/06/2021
ಬೆಂಗಳೂರು: ನಾನು ಜಾತಿ, ಜನಾಂಗ, ಧರ್ಮದ ವಿರೋಧಿಯಲ್ಲ. ಆದರೆ ಮೇಲು-ಕೀಳು ಎಂಬ ಭಾವನೆ, ತಾರತಮ್ಯ, ಅಸಮಾನತೆಯ ವಿರೋಧಿ. ಹುಟ್ಟಿನ ಆಧಾರದಲ್ಲಿ ಶ್ರೇಷ್ಟ, ಕನಿಷ್ಠ ಎಂದು ಹೇಳುತ್ತಾರಲ್ಲ ಅವರ ವಿರುದ್ಧ ನನ್ನ ಹೋರಾಟ ಎಂದು ನಟ ಚೇತನ್ ಹೇಳಿದರು.
ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರ ವಿಚಾರಣೆ ಎದುರಿಸಿದ ಬಳಿಕ ನಟ ಚೇತನ್ ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಮನಸ್ಥಿತಿ, ವ್ಯವಸ್ಥೆಯ ವಿರುದ್ಧ ನಾನು ನಿಂತುಕೊಳ್ಳುತ್ತೇನೆ. ಈ ವ್ಯವಸ್ಥೆ ಅರ್ಥ ಮಾಡಿಕೊಳ್ಳಬಾರದು. ಯಾರೂ ಬೇಧ ಭಾವ ಮಾಡಬಾರದು ಇಂತಹ ವ್ಯವಸ್ಥೆಯನ್ನು ನಾನು ವಿರೋಧಿಸುತ್ತಿದ್ದೇನೆ ಹೊರತು, ಜಾತಿ, ಧರ್ಮವನ್ನಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಲ್ಲದೇ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.
ಸರ್ಕಾರಿ ಮುದ್ರೆ ದುರ್ಬಳಕೆ ಮಾಡಿ ನಟ ಚೇತನ್ ವಿರುದ್ಧ ಪಿತೂರಿ | ದ್ರಾವಿಡ ಆರ್ಮಿಯಿಂದ ದೂರು