ನಟ ದರ್ಶನ್ ಫಾರಂ ಹೌಸ್ ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ! - Mahanayaka
2:10 PM Wednesday 5 - February 2025

ನಟ ದರ್ಶನ್ ಫಾರಂ ಹೌಸ್ ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ!

mysore
18/09/2021

ಮೈಸೂರು: ನಟ ದರ್ಶನ್ ಮಾಲಿಕತ್ವದ ಫಾರಂ ಹೌಸ್ ನಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಟಿ. ನರಸೀಪುರ ರಸ್ತೆಯಲ್ಲಿರುವ ಫಾರಂ ಹೌಸ್‌ ನಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಕುಟುಂಬವೊಂದರ ಬಾಲಕಿಯ ಮೇಲೆ ಸೆ.13ರಂದು ಸೋಮವಾರ ರಾತ್ರಿ ಅದೇ ತೋಟದ ಕುದುರೆಗೆ ಲಾಳ ಹೊಡೆಯುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಅತ್ಯಾಚಾರ ನಡೆಸಿದ್ದಾನೆ ಎಂದು  ವರದಿಯಾಗಿದೆ.’

ಅತ್ಯಾಚಾರ ನಡೆದಿರುವ ಬಗ್ಗೆ ಯಾರಿಗೂ ಹೇಳದಂತೆ ಆರೋಪಿಯು ಬಾಲಕಿಗೆ ಬೆದರಿಕೆ ಹಾಕಿದ್ದ. ಹೀಗಾಗಿ ಸೆಪ್ಟೆಂಬರ್ 13ರಂದು ನಡೆದಿರುವ ಘಟನೆ ಕುರಿತು ನಾಲ್ಕು ದಿನಗಳ ನಂತರ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ಸೆ.16ರಂದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

.ಇನ್ನಷ್ಟು ಸುದ್ದಿಗಳು…

ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯೊಳಗೆ ಒಬ್ಬಂಟಿಯಾಗಿತ್ತು 3 ವರ್ಷದ ಮಗು!

ಶಾರ್ಟ್ಸ್, ಟೀಶರ್ಟ್ ಧರಿಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ | ಆ ಬಳಿಕ ಪರೀಕ್ಷಾ ಕೇಂದ್ರದಲ್ಲಿ ನಡೆದದ್ದೇನು ಗೊತ್ತಾ?

ಸಿಲಿಕಾನ್ ಸಿಟಿ ಫ್ಲೈಓವರ್ ನಲ್ಲಿ ಆಕ್ಸಿಡೆಂಡ್ ಆದ ಜಾಗದಲ್ಲಿಯೇ ಕಾರು ನಿಲ್ಲಿಸಿ ಯುವಕ, ಯುವತಿಯರ ಡಾನ್ಸ್!

ಪತ್ನಿಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ, ಹಲ್ಲೆ | ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರೆಸ್ಟ್!

ಚಲಿಸುತ್ತಿರುವ ರೈಲಿನಲ್ಲಿ ಹುಚ್ಚಾಟ ಮೆರೆದ ಯುವಕರು!

ಮತ್ತೊಂದು ಫ್ಲೈಓವರ್ ನಿರ್ಮಾಣ ಮಾಡುವ ಸಿಹಿ ಸುದ್ದಿ ನೀಡಿದ ನಳಿನ್ ಕುಮಾರ್ ಕಟೀಲ್

ಇತ್ತೀಚಿನ ಸುದ್ದಿ