ಅಗಲಿದ ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ವ್ಯಾಪಕ ಆಕ್ರೋಶ - Mahanayaka
1:22 PM Monday 15 - September 2025

ಅಗಲಿದ ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ವ್ಯಾಪಕ ಆಕ್ರೋಶ

sanchari vijay
18/06/2021

ಬೆಂಗಳೂರು: ನಟ ಸಂಚಾರಿ ವಿಜಯ್ ಅವರಿಗೆ ಗೌರವ ಸಲ್ಲಿಸದೇ ಫಿಲಂ ಚೇಂಬರ್ ತಾರತಮ್ಯ ನೀತಿಯನ್ನು ಅನುಸರಿಸಿರುವುದು ಇದೀಗ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಅಗಲಿದವರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಸಂಚಾರಿ ವಿಜಯ್ ಅವರಿಗೆ ಅಗೌರವ ಸೂಚಿಸಲಾಗಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


Provided by

ಕನ್ನಡ ಚಿತ್ರರಂಗದ ಅಗಲಿದ ಗಣ್ಯರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಕರ್ನಾಟಕ ಫಿಲಂ ಚೇಂಬರ್  ಗುರುವಾರ ಆಯೋಜಿಸಿತ್ತು. ಆದರೆ, ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ತಮ್ಮ ಸಾವಿನ ಸಂದರ್ಭದಲ್ಲಿಯೂ ಅಂಗಾಂಗ ದಾನ ಮಾಡಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಫೋಟೋವನ್ನಿಟ್ಟು ಗೌರವಿಸುವ ಕನಿಷ್ಠ ಯೋಗ್ಯತೆಯನ್ನು ಕೂಡ ಫಿಲಂ ಚೇಂಬರ್ ತೋರದೇ ಅಗಲಿದ ಯುವ ನಟಗೆ ಅಗೌರವ ತೋರಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇನ್ನೂ ಈ ಬಗ್ಗೆ ಪತ್ರಕರ್ತ, ಬರಹಗಾರ ಚಂದ್ರಚೂಡ್ ಆಕ್ರೋಶ ವ್ಯಕ್ತಪಡಿಸಿ,  ಶ್ರದ್ಧಾಂಜಲಿ ಸಭೆಯಲ್ಲಿ ನನ್ನ ಗೆಳೆಯ ಸಂಚಾರಿ ವಿಜಯ್ ದೊಂದು ಭಾವಚಿತ್ರ ಇಡಲು ಅಸಾಧ್ಯವಾಯಿತೇ? ನಿಮಗೊಂದು ಧಿಕ್ಕಾರ ಎಂದಿದ್ದಾರೆ.

ಸಿನಿಮಾ ನಿರ್ದೇಶಕ ಲಿಂಗದೇವ್ರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗತಿಸಿದವರು ರಾಷ್ಟ್ರಪ್ರಶಸ್ತಿ ವಿಜೇತ ನಟರು, ಅಂಗದಾನ ಮಾಡಿ ಮಾದರಿಯಾದವರು. ಸರ್ಕಾರವೇ ಸರ್ಕಾರಿ ಗೌರವ ನೀಡಿ ವಿದಾಯ ಹೇಳಿತ್ತು. ಹಾಗಿರುವಾಗ ಪ್ರಾತಿನಿಧಿಕ ಸಂಸ್ಥೆಯಲ್ಲಿ ಗೌರವ ಸಲ್ಲಿಸದೇ ಇರುವುದು ಅವರ ಕುಟುಂಬಕ್ಕೆ ತೋರಿದ ಅಗೌರವ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ