ಟ್ರೋಲ್ ಗೊಳಗಾದ ನಟಿ ಸಮಂತಾ ಎಂತಹಾ ಫೋಟೋ ಹಂಚಿಕೊಂಡಿದ್ದಾರೆ ನೋಡಿ
16/03/2021
ಕಿಚ್ಚ ಸುದೀಪ್ ನಟನೆಯ ಈಗ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಸಮಂತಾ ಅಕ್ಕಿನೇನಿ ನಟನೆಯಲ್ಲಿ ಯಾರಿಗೇನೂ ಕಡಿಮೆ ಇಲ್ಲ. ಬಹುಭಾಷಾ ಟಾಪ್ ನಟಿಯರ ಪಟ್ಟಿಯಲ್ಲಿರುವ ಸಮಂತಾ ಅಕ್ಕಿನೇನಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಗಳನ್ನು ಆಗಾಗ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ತಮಿಳು ನಟ ವಿಜಯ್ ಸಿನಿಮಾಗಳಲ್ಲಿ ಸಮಂತಾ ಹೆಚ್ಚು ಜನಪ್ರಿಯರಾಗಿದ್ದಾರೆ. ವಿಜಯ್ ಜೊತೆಗಿನ ಹಾಸ್ಯ ದೃಶ್ಯಗಳಂತೂ ಅತ್ಯದ್ಭುತವಾಗಿ ಮೂಡಿ ಬಂದಿದೆ. ಇತ್ತೀಚೆಗಷ್ಟೇ ಬಿಕಿನಿ ತೊಟ್ಟು ಇನ್ಟಾಗ್ರಾಮ್ ನಲ್ಲಿ ಅವರು ಫೋಟೋ ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಟ್ರೋಲ್ ಕೂಡ ಆಗಿತ್ತು.
ಈ ಟ್ರೋಲ್ ನ ಬಳಿಕ ಸಮಂತಾ ಸೀಟಿಯುಟ್ಟು ಇದೀಗ ಮತ್ತೆ ಫೋಟೋ ಶೇರ್ ಮಾಡಿದ್ದು, ಬಿಕಿನಿ ಇಷ್ಟವಾಗದೇ ಇರುವ ತಮ್ಮ ಅಭಿಮಾನಿಗಳಿಗಾಗಿ ಈ ಫೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದ್ದಾರೆ.