ಕೋಳಿ ಮಾರಾಟಗಾರನ ಮನೆಗೆ ರಾಷ್ಟ್ರೀಯ ತನಿಖಾ ದಳದಿಂದ ದಿಢೀರ್ ದಾಳಿ - Mahanayaka

ಕೋಳಿ ಮಾರಾಟಗಾರನ ಮನೆಗೆ ರಾಷ್ಟ್ರೀಯ ತನಿಖಾ ದಳದಿಂದ ದಿಢೀರ್ ದಾಳಿ

13/12/2024

ಬಿಹಾರದ ಸೀತಾ ಮಾರಿ ಜಿಲ್ಲೆಯ ಮುಹಮ್ಮದ್ ಅಲೀಮ್ ಎಂಬ ಕೋಳಿ ಮಾರಾಟಗಾರನ ಮನೆಗೆ ರಾಷ್ಟ್ರೀಯ ತನಿಖಾ ದಳವು ದಿಢೀರನೇ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಬೆಳ್ಳಂಬೆಳಗ್ಗೆ ನಾಲ್ಕು ಗಂಟೆ 30 ನಿಮಿಷದ ವೇಳೆಗೆ ಎನ್ ಐ ಎ ಅಧಿಕಾರಿಗಳು ಮನೆಗೆ ದಾಳಿ ಇಟ್ಟಿದ್ದಾರೆ. ಈ ದಾಳಿಯಿಂದ ಮನೆಯ ಸದಸ್ಯರು ಬೆಕ್ಕಸ ಬೆರಗಾಗಿದ್ದಾರೆ.

ಎನ್ ಐ ಎ ತಂಡ ಅವರ ಮೊಬೈಲ್ ಅನ್ನು ಪಡಕೊಂಡದ್ದಲ್ಲದೆ ಅವರನ್ನು ಭಾಜಪತ್ತಿ ಪೊಲೀಸ್ ಠಾಣೆಗೆ ತನಿಖೆಗಾಗಿ ಕೊಂಡೊಯ್ದಿದೆ ಮತ್ತು ಐದು ಗಂಟೆಯ ಬಳಿಕ ಅವರನ್ನು ಬಿಡುಗಡೆ ಮಾಡಿದೆ ಎಂದು ತಿಳಿದು ಬಂದಿದೆ. ಆದರೆ ಮೊಬೈಲ್ ಫೋನನ್ನು ಅವರಿಗೆ ಹಿಂದಿರುಗಿಸಲಾಗಿಲ್ಲ.
ಅಲೀಂ ವಿಷಯದಲ್ಲಿ ನಮಗೆ ಯಾವುದೇ ಶಂಖೆ ಇಲ್ಲ ಮತ್ತು ಯಾವುದೇ ಶಂಕಿತ ಚಟುವಟಿಕೆಯಲ್ಲಿ ಅವರು ಭಾಗಿಯಾಗಿರುವುದನ್ನು ನಾವು ಕಂಡಿಲ್ಲ ಎಂದು ಅಧಿಕಾರಿಗಳಿಗೆ ನೆರೆಕೆರೆಯವರು ಉತ್ತರ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ