ಮಂಗಳೂರು: ಮಾರುತಿ ಯುವಕ ಮಂಡಲದಿಂದ ಫೆ.15ರಿಂದ 19ರವರೆಗೆ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ - Mahanayaka
4:34 AM Wednesday 5 - February 2025

ಮಂಗಳೂರು: ಮಾರುತಿ ಯುವಕ ಮಂಡಲದಿಂದ ಫೆ.15ರಿಂದ 19ರವರೆಗೆ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟ

cricket
30/01/2023

ಮಂಗಳೂರು ನಗರದ ಉಳ್ಳಾಲದ ಮೊಗವೀರಪಟ್ಣದ ಮಾರುತಿ ಯುವಕ ಮಂಡಲ, ಮಾರುತಿ ಕ್ರಿಕೆಟರ್ಸ್ ಗೆ 35 ನೇ ವರ್ಷ ತುಂಬಿದೆ.

ಇದನ್ನು ನೆನಪಾಗಿರಿಸಲು ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯವನ್ನು ಮಂಗಳೂರು ನೆಹರೂ ಮೈದಾನದಲ್ಲಿ ಫೆಬ್ರವರಿ 15 ರಿಂದ 19 ರ ವರೆಗೆ ಅಹರ್ನಿಶಿ ಪಂದ್ಯಾವಳಿ ಮೂಲಕ ಆಯೋಜಿಸಲು ನಿರ್ಧರಿಸಿದ್ದೇವೆ ಎಂದು ಅಧ್ಯಕ್ಷ ವರದರಾಜ್ ಬಂಗೇರ ಹೇಳಿದ್ದಾರೆ.

ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರುತಿ ಯುವಕ ಮಂಡಲ ಉಳ್ಳಾಲಕ್ಕೆ ಈಗ 35ರ ಹರೆಯ. ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ಸಮಾಜದಲ್ಲಿ ಉತ್ತಮ ಹೆಸರನ್ನು ಪಡೆದಿದೆ. 2012 ರ ಇಸವಿ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕನ್ನಡ ಪ್ರಾಥಮಿಕ ಉಳ್ಳಾಲದ ಶಾಲೆಗೆ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶಾಲಾ ಕಟ್ಟಡ ನೀಡಿರುವುದಲ್ಲದೆ ಕರಾವಳಿಯೇ ಮರೆಯಲಾರದ ಉಳ್ಳಾಲದ ಚೊಚ್ಚಲ ಬೀಚ್ ಫೆಸ್ಟಿವಲ್ ನ್ನು ಉಳ್ಳಾಲದ ಕಡಲ ಕಿನಾರೆಯಲ್ಲಿ ಆಯೋಜಿಸಿದ್ದು ಇತಿಹಾಸ ಎಂದರು.

ಪ್ರತೀ ವರ್ಷವೂ ಪ್ರತಿಭಾ ಪುರಸ್ಕಾರ, ವೈದ್ಯಕೀಯ ನೆರವು, ಶೈಕ್ಷಣಿಕ ನೆರವು, ಸಹಾಯ ಉದಾತ್ತವಾದ ಇಂತಹ ಮದುವೆ ಹೆಣ್ಣುಮಕ್ಕಳ ಸೇವಾಕಾರ್ಯವನ್ನು ಮಾಡುತ್ತಾ ಈ ಭಾಗದ ಜನರಿಗೆ ಆಶಾಕಿರಣವಾಗಿ ಸಾಲು ಮರದ ಬೆಳಗುತ್ತಿದೆ. ಅಕ್ಷರ ಸಂತ ಹರೇಕಳ ಹಾಜಬ್ಬರವರು, ತಿಮ್ಮಕ್ಕರವರು, ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ರವರು, ಕಲಾವಿದ ವಿಲಾಸ್ ನಾಯಕ್ ರವರು, ಕ್ರಿಕೆಟಿಗ ನಿಹಾಲ್ ಉಳ್ಳಾಲ್ ರವರು ಹಾಗೂ ಅಥ್ಲೆಟಿಗರಾದ ಸಹನಾ ಕುಮಾರಿ ಹಾಗೂ ಪೂವಮ್ಮರವರುಗಳು ದೊಡ್ಡ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗುವ ಮೊದಲೇ ಅವರನ್ನು ಗುರುತಿಸಿ ಮಾರುತಿ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಹೆಮ್ಮೆ ಮಾರುತಿ ಯುವಕ ಮಂಡಲಕ್ಕಿದೆ ಅಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ