ನೌಶಾದ್ ಹಾಜಿ ಸೂರಲ್ಪಾಡಿ ನಿಧನಕ್ಕೆ ಎಸ್ ಡಿಪಿಐ, ಮುಸ್ಲಿಮ್ ಒಕ್ಕೂಟ ಸಂತಾಪ
ಸಮುದಾಯದ ಬಡ ಜನರ ಸೇವೆಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟು ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ದಣಿವರಿಯದ ಸಮುದಾಯ ಸೇವಕ , ಸಾಮಾಜಿಕ ಮುಂದಾಳು, ಸದಾ ಹಸನ್ಮುಕಿ ವ್ಯಕ್ತಿತ್ವದ ನೌಶಾದ್ ಹಾಜಿ ಸೂರಲ್ಪಾಡಿ ಯವರ ನಿಧನವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಸ್ ಡಿಪಿಐ ಸಂತಾಪ ಸೂಚಿಸಿದೆ.
ಸಮುದಾಯದ ಸಬಲೀಕರಣಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ ನೌಶಾದ್ ಹಾಜಿಯವರು ನಂಡೆ ಪೆಂಙಳ್ ಎಂಬ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಸಮರ್ಥ ನೇತೃತ್ವ ನೀಡಿ ಅದೆಷ್ಟೋ ಬಡ ಕುಟುಂಬಕ್ಕೆ ಬೆಳಕಾಗಿದ್ದರು , ಇಂತಹ ಧೀಮಂತ ವ್ಯಕ್ತಿತ್ವ ವನ್ನ ಕಳೆದುಕೊಂಡ ಸಮುದಾಯವು ಇಂದು ಬಡವಾಗಿದೆ ಎಂದು ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಸಂತಾಪ ಪ್ರಕಟಣೆಯಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.
ನೌಶಾದ್ ರ ಮರಣದ ನೋವನ್ನು ಸಹಿಸುವ ಶಕ್ತಿಯನ್ನು ಜಗದೊಡೆಯ ಅವರ ಕುಟುಂಬಕ್ಕೆ ಮತ್ತು ಅವರ ಹಿತೈಷಿಗಳಿಗೆ ನೀಡಲಿ. ಅವರು ಮಾಡಿದ ಸತ್ಕರ್ಮಗಳು ಪರಲೋಕದ ಬದುಕಿನಲ್ಲಿ ಅವರಿಗೆ ಉನ್ನತ ದರ್ಜೆಯನ್ನು ಅಲ್ಲಾಹನು ನೀಡಿ ಅನುಗ್ರಹಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಂತಾಪ
ದ.ಕ.ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಸಂಸ್ಥೆಯ ಅಧ್ಯಕ್ಷ, ಬೆಳ್ತಂಗಡಿ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಕೋಶಾಧಿಕಾರಿ, ಮೂಡಬಿದ್ರಿ ದಾರುನ್ನೂರ್ ಎಜುಕೇಷನ್ ಸೆಂಟರ್ ಉಪಾಧ್ಯಕ್ಷರಾಗಿದ್ದ, ನಂಡೆ ಪೆಂಙಲ್ ವಿವಾಹ ಸಂಸ್ಥೆಯ ಮಾಜಿ ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸದಸ್ಯರಾಗಿದ್ದ ಹಾಲಿ ಗಂಜಿಮಠದಲ್ಲಿ ವಾಸಿಸುತ್ತಿದ್ದ ನೌಶಾದ್ ಹಾಜಿ ಸೂರಲ್ಪಾಡಿಯವರು ಇಂದು ಬೆಳಿಗ್ಗೆ ವೇಣೂರು ಗೊಳಿಯಂಗಡಿ ಎಂಬಲ್ಲಿ ನಡೆದ ವಾಹನ ಮುಖಾಮುಖಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೊತೆಗೆ ವಾಹನ ಚಾಲಕ ಮುಷರಫ್ ರವರು ನಿಧನ ಹೊಂದಿದ್ದಾರೆ.
ನೌಶಾದ್ ಹಾಜಿ ಯವರು ಓರ್ವ ಸಮಾಜಮುಖಿ ಚಿಂತಕ, ಸೇವಕ ಮತ್ತು ಉದಾರತಾ ವ್ಯಕ್ತಿಯಾಗಿದ್ದರು. ಮೃತರ ಅಗಲಿಕೆಯಿಂದ ಇಂದು ಮುಸ್ಲಿಮ್ ಸಮುದಾಯ ಒಂದು ಸಂಸ್ಥೆಯನ್ನೇ ಕಳೆದು ಕೊಂಡಂತಿದೆ. ಮೃತರ ಕುಟುಂಬಕ್ಕೆ ಅವರ ಅಗಲಿಕೆಯ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw