ನೌಶಾದ್ ಹಾಜಿ ಸೂರಲ್ಪಾಡಿ ಅವರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ! - Mahanayaka

ನೌಶಾದ್ ಹಾಜಿ ಸೂರಲ್ಪಾಡಿ ಅವರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ!

naushad haji suralpadi
01/01/2023

ಮಂಗಳೂರು: ಸಾಮಾಜಿಕ, ಧಾರ್ಮಿಕ ಮುಖಂಡ ನೌಶಾದ್ ಹಾಜಿ ಸೂರಲ್ಪಾಡಿ ಹಾಗೂ ಅವರ ಕಾರು ಚಾಲಕ ಮುಷರಫ್ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ವೇಣೂರು ಗರ್ಡಾಡಿ ರಸ್ತೆಯಲ್ಲಿ ಬಸ್ ಹಾಗೂ ಕಾರು ಅಪಘಾತದದಲ್ಲಿ ಮೃತಪಟ್ಟಿದ್ದರು. ಇವರ ನಿಧನಕ್ಕೆ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Provided by

ನೌಶಾದ್ ಹಾಜಿ ಸೂರಲ್ಪಾಡಿ ಅವರ ನಿಧನದ ಹಿನ್ನೆಲೆಯಲ್ಲಿ ಸೂರಲ್ಪಾಡಿ ಮಸೀದಿ ವಠಾರದಲ್ಲಿ  ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಸೀದಿ ವಠಾರದಲ್ಲಿ ಜನ ಸಾಗರವೇ ಹರಿದು ಬಂದಿದೆ.

‘ನಂಡೆ ಪೆಂಙಳ್’(ನನ್ನ ಸಹೋದರಿ) ಎಂಬ ಅಭಿಯಾನದ ಮೂಲಕ ನೂರಾರು ಬಡ ಕುಟುಂಬದ ಯುವತಿಯರ ವಿವಾಹಕ್ಕೆ ಸಹಕಾರಿಯಾಗಿದ್ದ ನೌಶಾದ್ ಹಾಜಿ ಜನರಿಗೆ ಹತ್ತಿರವಾಗಿದ್ದರು. ತಮ್ಮ ವೃತ್ತಿ ಜೀವನದ ಕಡೆಗೆ ಮಾತ್ರವೇ ಯೋಚನೆ ಮಾಡದೇ, ಪೇ ಬ್ಯಾಕ್ ಟು ಸೊಸೈಟಿ ಅನ್ನೋ ಮಾದರಿಯಲ್ಲಿ ಸಮಾಜಕ್ಕೆ ನೆರವಾದ ನೌಶಾದ್ ಹಾಜಿ ಸೂರಲ್ಪಾಡಿಗಾಗಿ ಸಾರ್ವಜನಿಕರು ಜಾತಿ, ಧರ್ಮ ಬೇಧ ಮರೆತು ಆಗಮಿಸಿ ಅಂತಿಮ ದರ್ಶನ ಪಡೆದು ಕಣ್ಣೀರಾದರು.


Provided by

ನೌಷಾದ್ ಹಾಜಿ ಅವರು ಹುಟ್ಟು ಹಾಕಿದ್ದ ನಂಡೆ ಪೆಂಙಳ್ ಅಭಿಯಾನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆಯಾಗದ ಎಷ್ಟೋ ಹೆಣ್ಣು ಮಕ್ಕಳ ಜೀವನಕ್ಕೆ ಬೆಳಕಾಗಿತ್ತು. ಬಡ ಕುಟುಂಬಗಳಿಗೆ ಆಸರೆಯಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ