ಪತಿಯ ಜೊತೆ ಸಿನಿಮಾ ನೋಡಿ ವಾಪಸಾಗುತ್ತಿದ್ದ ನವವಿವಾಹಿತೆ ಅಪಘಾತಕ್ಕೆ ಬಲಿ
ಬೆಂಗಳೂರು: ಆ್ಯಕ್ಟೀವಾ ಹೋಂಡಾಗೆ ಅಪರಿಚಿತರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಸವಾರೆ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರಿನ ಕಲ್ಯಾಣ ನಗರದ ಜಂಕ್ಷನ್ ಬಳಿಯಲ್ಲಿ ನಡೆದಿದೆ.
23 ವರ್ಷದ ಶ್ವೇತಾ ಮೃತಪಟ್ಟ ಮಹಿಳೆಯಾಗಿದ್ದಾರೆ. ನವವಿವಾಹಿತರಾಗಿದ್ದ ಶ್ವೇತಾ ಹಾಗೂ ಆನಂದ್ ನೆನ್ನೆ ರಾತ್ರಿ ಫಿಲ್ಮ್ ನೋಡಿಕೊಂಡು ವಾಪಾಸಾಗುವ ವೇಳೆ ಈ ದುರ್ಘಟನೆ ನಡೆದಿದೆ.
ಅಪಘಾತದ ಪರಿಣಾಮ ಪತಿ ಆನಂದ್ ಗೆ ಗಂಭೀರವಾದ ಗಾಯವಾಗಿದ್ದು, ಹೆಚ್.ಬಿ.ಆರ್. ಮುಖ್ಯ ರಸ್ತೆ ಬಳಿ ಇರುವ ಆಲ್ಟಿಯಸ್ ಆಸ್ಪತ್ರೆಯಲ್ಲಿ ಆನಂದ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶ್ವೇತಾ ಅವರ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka