ನವಜಾತ ಶಿಶುವನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ನೀರಿನ ತೊಟ್ಟಿಗೆಸೆದ ಪೋಷಕರು

kollegala news
12/06/2021

ಕೊಳ್ಳೇಗಾಲ: ಖಾಲಿ ನೀರಿನ ತೊಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದ್ದು,  ಮಗುವಿಗೆ ಅಂಗವೈಕಲ್ಯ ಇದ್ದ ಕಾರಣ ಪೋಷಕರು ಮಗುವನ್ನು ತೊರೆದಿದ್ದಾರೆ ಎನ್ನುವ ಅನುಮಾನ ಸೃಷ್ಟಿಯಾಗಿದೆ.

6 ದಿನದ ಗಂಡು ಮಗು ಇದಾಗಿದ್ದು, ಮಗುವಿನ ಕರುಳಬಳ್ಳಿಯನ್ನು ಕೂಡ ಕತ್ತರಿಸದೇ ಹಾಗೆ ಬಿಟ್ಟಿರುವುದರಿಂದ ಇದು ಆಸ್ಪತ್ರೆಯಲ್ಲಿ ಜನನವಾಗಿರುವ ಶಿಶು ಅಲ್ಲ ಎಂದು ಹೇಳಲಾಗಿದೆ. ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಮಗುವನ್ನು ತೊಟ್ಟಿಗೆ ಎಸೆದಿದ್ದು ಕಂಡು ಬಂದಿದೆ.

ಆಸ್ಪತ್ರೆ ಸಿಬ್ಬಂದಿ ಶವಾಗಾರದ ಬಳಿ ಹೋದ ವೇಳೆ ದುರ್ವಾಸನೆ ಬೀರಿದ್ದು, ಗಮನಿಸಿದಾಗ ಶಿಶುವಿನ ಮೃತದೇಹ ಪತ್ತೆಯಾಗಿದೆ. ಸದ್ಯ ಶಿಶುವನ್ನು ಯಾರು ಎಸೆದು ಹೋಗಿದ್ದಾರೆ ಎಂಬ ಬಗ್ಗೆ  ತನಿಖೆ ನಡೆಸಲಾಗುತ್ತಿದ್ದು, ಪೊಲೀಸರು ಸಿಸಿ ಕ್ಯಾಮರವನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version