ದೇವರ ದರ್ಶನಕ್ಕೆ ತೆರಳಿದ್ದ ನವವಿವಾಹಿತೆ ಅಪಘಾತಕ್ಕೆ ಬಲಿ: ವರ ಸಹಿತ 7 ಮಂದಿಗೆ ಗಂಭೀರ ಗಾಯ
02/07/2021
ವಿಜಯಪುರ: ಮದುವೆಯಾಗಿ ದೇವರ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ತೆರಳಿದ್ದ ವಧುವರ ಅಪಘಾತಕ್ಕೆ ಸಿಲುಕಿದ್ದು, ಪರಿಣಾಮವಾಗಿ ವಧು ದಾರುಣವಾಗಿ ಸಾವನ್ನಪ್ಪಿ ವರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸಿಂದಗಿ ತಾಲೂಕಿನ ಯರಗಲ್ ಬಿ.ಕೆ. ಗ್ರಾಮದ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಟೆಂಪೂ ಹಾಗೂ ಕ್ರೂಸರ್ ಮಧ್ಯೆ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ ನವ ವಿವಾಹಿತೆ ರಾಣಿ ಗಣೇಶ್ ಚವ್ಹಾಣ್ ಮೃತಪಟ್ಟಿದ್ದು, ವರ ಗಣೇಶ್ ಚವ್ಹಾಣ್ ಸೇರಿದಂತೆ 7 ಮಂದಿಗೆ ಗಂಭೀರ ಗಾಯವಾಗಿದೆ.
ಮದುವೆ ನಂತರ ಶಂಕರವಾಡಿ ಗ್ರಾಮದಿಂದ ಕೊಕಟನೂರ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ಸಂಬಂಧ ಸಿಂಧಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಕ್ಕಳ ಸಹಿತ ಒಂದೇ ಕುಟುಂಬದ 6 ಮಂದಿ ಕೆರೆಗೆ ಹಾರಿ ಆತ್ಮಹತ್ಯೆ