ಕೊರಗಜ್ಜನ ಹುಂಡಿಗೆ ಕಾಂಡಮ್ ಹಾಕಿರುವ ಪ್ರಕರಣಕ್ಕೆ ಟ್ವಿಸ್ಟ್: ನವಾಝ್ 1 ವರ್ಷಗಳಿಂದ ಮಾರಕ ಕಾಯಿಲೆಯಿಂದ ಬಳಲುತ್ತಿದ್ದ! - Mahanayaka
12:05 PM Wednesday 16 - April 2025

ಕೊರಗಜ್ಜನ ಹುಂಡಿಗೆ ಕಾಂಡಮ್ ಹಾಕಿರುವ ಪ್ರಕರಣಕ್ಕೆ ಟ್ವಿಸ್ಟ್: ನವಾಝ್ 1 ವರ್ಷಗಳಿಂದ ಮಾರಕ ಕಾಯಿಲೆಯಿಂದ ಬಳಲುತ್ತಿದ್ದ!

koragajja
02/04/2021

ಮಂಗಳೂರು: ಕೊರಗಜ್ಜನ ಹುಂಡಿಗೆ ಕಾಂಡಮ್ ಹಾಕಿರುವ ಆರೋಪದಲ್ಲಿ ಇಬ್ಬರು ಯುವಕರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಮೃತಪಟ್ಟಿದ್ದಾನೆ ಎಂದು ನಿನ್ನೆ ಮಂಗಳೂರು ಕಮಿಷನರ್ ಹೇಳಿದ್ದರು. ನವಾಜ್ ನನ್ನು ಕೊರಗಜ್ಜನೇ ಮಾರಕರೋಗ ಭರಿಸಿ ಕೊಂದಿದ್ದಾರೆ ಎಂದು ನಿನ್ನೆ ವ್ಯಾಪಕವಾಗಿ ಚರ್ಚೆಗೀಡಾಗಿತ್ತು. ಆದರೆ ಇದೀಗ ನವಾಝ್  ಸುಮಾರು ಒಂದೂವರೆ ವರ್ಷಗಳಿಂದ ಮಾರಕ ರೋಗದಿಂದ ಬಳಲುತ್ತಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.


Provided by

ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರ ಮಾಡಿರುವ ಪ್ರಕರಣದಲ್ಲಿ ನವಾಝ್ ಗೆ ಯಾವುದೇ ಸಂಬಂಧ ಇಲ್ಲ. ಪೊಲೀಸರು ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹೇಳಿಕೆಯನ್ನು ಯಾವುದೇ ಪೂರ್ವಾಪರ ವಿಚಾರಿಸದೇ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇನ್ನೂ ಎರಡು ಬಾರಿ ವಿದೇಶಕ್ಕೆ ಕೆಲಸ ಮಾಡಲು  ನವಾಝ್ ಹೋಗಿದ್ದ.  ಆತನಿಗೆ ಎಚ್ ಐವಿ ಸೋಂಕು ತಗಲಿತ್ತು. ಹೀಗಾಗಿ ಆತ ಕಳೆದ 1 ಒಂದೂವರೆ ವರ್ಷಗಳಿಂದ ಮನೆಯಲ್ಲಿಯೇ ಇದ್ದ. ಈ ಬಗ್ಗೆ ನಮ್ಮಲ್ಲಿ ವೈದ್ಯಕೀಯ ದಾಖಲೆ ಇದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.  ಇದಲ್ಲದೇ ಆರೋಪಿಗಳಿಗೂ ನವಾಝ್ ಗೂ ಪರಿಚಯವೇ ಇರಲಿಲ್ಲ ಎಂದು ಹೇಳುತ್ತಿದ್ದಾರೆ.

ನವಾಝ್ ಹೊರ ದೇಶಕ್ಕೆ ಹೋದ ಬಳಿಕ ಕೆಲಸಕ್ಕೆ ಹೋಗಿರಲಿಲ್ಲ. ನವಾಝ್ ಮೃತಪಟ್ಟು 40 ದಿನಗಳಾಗಿವೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಅವನು ಎಲ್ಲಿಗೂ ಹೋಗುತ್ತಿರಲಿಲ್ಲ. ನವಾಝ್ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಕಮಿಷನರ್ ಸುಳ್ಳು ಆರೋಪ ಮಾಡಿದ್ದಾರೆ.  ಆರೋಪಿಗಳು ನವಾಝ್ ನ ಹೆಸರು ಹೇಳಿದ ತಕ್ಷಣವೇ ತನಿಖೆ ಕೂಡ ಮಾಡದೇ ನೇರವಾಗಿ ಅವರು ನವಾಝ್ ನ ಹೆಸರು ಹೇಳಿದ್ದಾರೆ ಎಂದು ನವಾಝ್ ನ ತಾಯಿ, ಅಕ್ಕ ಹಾಗೂ ಸ್ಥಳೀಯರು ಹೇಳುತ್ತಿದ್ದಾರೆ.

ಬಂಧಿತ ಆರೋಪಿಗಳು ಪೊರ್ಕೊಡಿಯವರು. ನವಾಝ್ ನ ಮನೆಯಿರುವುದು ಜೋಕಟ್ಟೆಯಲ್ಲಿ ಇವರ ಮನೆಗಳ ಮಧ್ಯೆ ಸುಮಾರು 4-5 ಕೀ.ಮೀ. ಅಂತರವಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಜೊತೆಗೆ ನಮ್ಮ ಮನೆಗೆ ಪೊಲೀಸರು ಬಂದು ಈ ಬಗ್ಗೆ ವಿಚಾರಿಸಿಯೇ ಇಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ