ಲಂಚದ ಆರೋಪ: ನಾವೆಲ್ಲ ಈಶ್ವರಪ್ಪ ಜೊತೆಗಿದ್ದೇವೆ ಎಂದ ರೇಣುಕಾಚಾರ್ಯ!
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಳಿ ಬಂದಿರುವ ಲಂಚ ಆರೋಪ ಶುದ್ಧ ಸುಳ್ಳು, ಇದರ ಹಿಂದೆ ಕಾಂಗ್ರೆಸ್ ಪ್ರಚೋದನೆ ಇದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪ ಮಾಡಿರುವವ ಬಿಜೆಪಿ ಪಕ್ಷದವರು ಅಂತ ಲೆಬಲ್ ಹಾಕಿಕೊಂಡಿದ್ದರಾ ಎಂಬ ಅನುಮಾನ ಕಾಡುತ್ತಿದೆ. ಬಿಜೆಪಿಯವರಾಗಿದ್ದರೆ ಈಶ್ವರಪ್ಪ ಅವರನ್ನ ಭೇಟಿ ಮಾಡಬೇಕಿತ್ತು ಅಥವಾ ರಾಜ್ಯಾಧ್ಯಕ್ಷ ಅವರನ್ನ ಭೇಟಿ ಮಾಡಬೇಕಿತ್ತು ಎಂದು ಅನುಮಾನ ವ್ಯಕ್ತಪಡಿಸಿದರು.
ಈಶ್ವರಪ್ಪ ಹಿರಿಯ ಸಚಿವ ಹಿಂದು ಉಳಿದ ವರ್ಗದ ನಾಯಕರಾಗಿದ್ದಾರೆ. ಯಾರೋ ಈಶ್ವರಪ್ಪ ವಿರುದ್ದ ಆರೋಪ ಮಾಡಿದರೆ ನಂಬಲು ಆಗುತ್ತಾ. ಈಶ್ವರಪ್ಪ ವಿರುದ್ಧವಾಗಿ ಯಾವ ಶಾಸಕರು ದೂರು ನೀಡಿಲ್ಲ. ನಾವೆಲ್ಲರೂ ಅವರ ಜೊತೆಗೆ ಇದ್ದೀವಿ. ಈಶ್ವರಪ್ಪ ಜೊತೆಗೆ ನಾವೆಲ್ಲರೂ ಮಾತನಾಡುತ್ತೇವೆ ಎಂದರು.
ಈ ಆರೋಪ ಮಾಡಲು ಕಾಂಗ್ರೆಸ್ ಪ್ರಚೋದನೆ ನೀಡಿದೆ. ಈಶ್ವರಪ್ಪ ತಮ್ಮ ಇಲಾಖೆಯ ಅನುದಾನವನ್ನ ಪಾರದರ್ಶಕತೆ ಯಿಂದ ಎಲ್ಲಾ 224 ಕ್ಷೇತ್ರಗಳಿಗೂ ನೀಡಿದ್ದಾರೆ. ಬರೀ ಬಿಜೆಪಿ ಇರುವ ಕ್ಷೇತ್ರಗಳಿಗೆ ಮಾತ್ರ ಕೊಟ್ಟಿಲ್ಲ. ಈಶ್ವರಪ್ಪ ಮೇಲಿನ ಆರೋಪವನ್ನ ನಾನು ಒಪ್ಪಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಿಸಿ ಬಂದಿದ್ದ ಶಿಕ್ಷಕಿ ಅಮಾನತು
ಬೆಂಗಳೂರು ವಿವಿ: ಕುಲಪತಿ ನೇಮಕ ರದ್ದಾದರೂ, ಮುಗಿಯದ ಗೊಂದಲ!
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಅಧ್ಯಕ್ಷರಾಗಿ ಕೆ.ಎಂ.ಫಯಾಝ್ ಆಯ್ಕೆ
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಗೆ ಒಂದು ವರ್ಷ ಜೈಲು