ನವೀನ್ ಸಾವು: ಬಿಜೆಪಿ ನಾಯಕರಿಂದ ಅರ್ಥವಿಲ್ಲದ ಹೇಳಿಕೆ; ತಮಿಳುನಾಡು ಸಿಎಂ ಸ್ಟಾಲಿನ್ ವಾಗ್ದಾಳಿ - Mahanayaka
10:08 PM Thursday 14 - November 2024

ನವೀನ್ ಸಾವು: ಬಿಜೆಪಿ ನಾಯಕರಿಂದ ಅರ್ಥವಿಲ್ಲದ ಹೇಳಿಕೆ; ತಮಿಳುನಾಡು ಸಿಎಂ ಸ್ಟಾಲಿನ್ ವಾಗ್ದಾಳಿ

stalin
03/03/2022

ಚೆನ್ನೈ: ಉಕ್ರೇನ್‍ ನಲ್ಲಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿ ಸಾವಿನ ಬಗ್ಗೆ ಕೆಲವು ಬಿಜೆಪಿ ನಾಯಕರು ಅರ್ಥವಿಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

ಖಾರ್ಕಿವ್ ಶೆಲ್ ದಾಳಿಗೆ ಬಲಿಯಾದ ಕರ್ನಾಟಕದ ವಿದ್ಯಾರ್ಥಿ ನವೀನ್ ವಿಚಾರವಾಗಿ ಮಾತನಾಡಿದ ಅವರು, ನವೀನ್ ಶೇ. 97ರಷ್ಟು ಅಂಕಗಳನ್ನು ಗಳಿಸಿದ್ದು, ನಂತರ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗದೇ ಒತ್ತಾಯದಿಂದ ಉಕ್ರೇನ್‍ನಲ್ಲಿ ಓದಲು ಹೋದ ವಿಚಾರ ನನಗೆ ಬೇಸರ ತಂದಿದೆ ಎಂದಿದ್ದಾರೆ.

ಅಲ್ಲದೆ, ಉಕ್ರೇನ್‍ ನಂತಹ ಸಣ್ಣ ದೇಶಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಏಕೆ ಹೋಗುತ್ತಾರೆ ಎಂದು ಕೇಳಲು ಬಿಜೆಪಿಗೆ ಇದು ಸರಿಯಾದ ಸಮಯವಲ್ಲ. ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಸರ್ಕಾರದ ಹೇಳಿಕೆಗಳು, ಕೆಲವು ಕೇಂದ್ರ ಸಚಿವರ ಸಂದರ್ಶನಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಬೆಂಬಲಿಸುವ ಪೋಸ್ಟ್‌ಗಳು ಗಾಯದ ಮೇಲೆ ಬರೆ ಎಳೆದಿದಂತಿದೆ. ಪ್ರಧಾನಿ ಮೋದಿ ಅವರು ಈ ವಿಚಾರವಾಗಿ ಕಟ್ಟುನಿಟ್ಟಿನ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು. ಹಾಗೆಯೇ ಎಲ್ಲರಿಗೂ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದಾರೆ.

ನೀಟ್ ವಿದ್ಯಾರ್ಥಿಗಳಿಗೆ ಅಡ್ಡಿಯಾಗಿರುವುದು ಮತ್ತು ಬಡತನದ ಹಿನ್ನೆಲೆ ವೈದ್ಯಕೀಯ ಆಕಾಂಕ್ಷೆಗಳನ್ನು ಕಸಿದುಕೊಳ್ಳುತ್ತಿರುವುದೇ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಲು ಕಾರಣ. ಇದಕ್ಕೆ ಡಿಎಂಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನೀಟ್ ರದ್ದುಪಡಿಸಲು ಆದ್ಯತೆ ನೀಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಡಿವೈಡರ್‌ ಗೆ ಕಾರು ಡಿಕ್ಕಿ: ಓರ್ವ ಸಾವು, ಮೂವರಿಗೆ ಗಾಯ

ಪ್ರೀತಿಸಿ ಮದುವೆಯಾದ ಯುವಕ ಆತ್ಮಹತ್ಯೆ: ಸತ್ತು ಮೂರು ದಿನವದರೂ ಕುಟುಂಬಸ್ಥರಿಗೆ ತಿಳಿಸದ ಪತ್ನಿ

ಕಂದಕಕ್ಕೆ ಉರುಳಿದ್ದ ಬೋಲೇರೋ ಜೀಪ್‌: ಸ್ಥಳದಲ್ಲೇ ಮಹಿಳೆ ಸಾವು

ಕೀವ್‌ ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಸಹಾಯ ಮಾಡಿ: ಭಾರತೀಯ ವೈದ್ಯ ಕುಟುಂಬದ ಮನವಿ

 

ಇತ್ತೀಚಿನ ಸುದ್ದಿ