ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ: ರಿಷಿಕುಮಾರ್ ಸ್ವಾಮೀಜಿಯಿಂದ ಮತ್ತೆ ವಿವಾದಾತ್ಮಕ ಹೇಳಿಕೆ
ಮಂಡ್ಯ: ನಮ್ಮ ಒಬ್ಬನನ್ನು ಅವರು ಹತ್ಯೆಗೈದಿದ್ದಾರೆ. ನಾವು ಅವರ ಹತ್ತು ಜನರನ್ನು ಹೊಡೆಯುತ್ತೇವೆ ಎಂದು ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾವೇರಿ ನದಿಯಲ್ಲಿ ಹರ್ಷನ ಅಸ್ಥಿ ವಿಸರ್ಜಿಸಿದ ಬಳಿಕ ಮಾತನಾಡಿದ ಅವರು, ಗಡಿಯ ವಿಚಾರದಲ್ಲಿ ಪ್ರಧಾನಿ ಮೋದಿ ನಮ್ಮ ಸೈನಿಕರಿಗೆ ಹೇಳಿದ್ದರು. ಗಡಿಯ ಒಳಗಿನ ವಿಚಾರಕ್ಕೆ ನಾವು ಇದನ್ನು ಅನ್ವಯಿಸಿಕೊಳ್ಳುತ್ತಿದ್ದೇವೆ. ಒಬ್ಬರಿಗೆ 10 ಜನರನ್ನು ಹೊಡೆಯುತ್ತೇವೆ. ನಾವು ಯಾಕೆ ಹೊಡೆಯಬಾರದು?. ಇನ್ನೊಂದು ಇಂತಹ ಪ್ರಕರಣ ನಡೆದರೂ ಹಿಂದೂ ಗೋಪುರ ಬಿಟ್ಟು, ಇನ್ಯಾವ ಗೋಪುರ ಇರುವುದಿಲ್ಲ. ನಮ್ಮ ಕಪಿ ಸೈನ್ಯ ಎಲ್ಲವನ್ನು ಬೀಳುಸುತ್ತವೆ ನೆನಪಿರಲಿ. ನಮ್ಮ ಬಳಿಯು ವಾನರ ಸೈನ್ಯ ಇದೆ. ಆ ಸೈನ್ಯ ಏನು ಮಾಡುತ್ತೆ ನೋಡಿ ಎಂದು ಅವರು ಎಚ್ಚರಿಕೆ ನೀಡಿದರು.
ಶಿವಮೊಗ್ಗದಿಂದ ಶ್ರೀರಂಗಪಟ್ಟಣಕ್ಕೆ ಹರ್ಷನ ಅಸ್ಥಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಆದರೆ, ಪೊಲೀಸರು ಅಸ್ಥಿ ತರಲು ಹರ್ಷ ಮನೆಯವರಿಗೆ ಇಷ್ಟ ಇಲ್ಲ ಅಂತ ಹೇಳಿದರು. ಅವರ ತಂದೆ-ತಾಯಿಗೆ ಇಷ್ಟವಿಲ್ಲದೇ ನನ್ನ ಕೈಗೆ ಅಸ್ಥಿ ಕೊಟ್ಟಿದ್ದಾರಾ? ಪೊಲೀಸನವರು ಬೆದರಿಸಿ ಅಸ್ಥಿ ಕೊಡದಂತೆ ಹೇಳಿದ್ದರು. ಈ ರೀತಿಯ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ದೇಶದ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ: ಪ್ರಮೋದ್ ಮುತಾಲಿಕ್
ರಷ್ಯಾ ದಾಳಿಗೆ ನಾಗರಿಕರು, ಸೈನಿಕರು ಸೇರಿ 137 ಮಂದಿ ಸಾವು: ಉಕ್ರೇನ್
ಉಕ್ರೇನ್ ನಲ್ಲಿ ಸಿಲುಕಿದ್ದಾರೆ ಕರ್ನಾಟಕದ ಮೂವರು ವಿದ್ಯಾರ್ಥಿಗಳು!
ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ: ಪ್ರಮೋದ್ ಮುತಾಲಿಕ್
ರಷ್ಯಾ ಆಕ್ರಮಣ ಆರಂಭ: ಉಕ್ರೇನ್ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ