ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ... ಡಿಶ್ಯುಂ | ವಿಡಿಯೋ ವೈರಲ್ - Mahanayaka
9:24 AM Thursday 14 - November 2024

ನಾವು ಫಸ್ಟ್… ನಾವು ಫಸ್ಟ್…! ಮದುವೆ ನಡೆಸಲು ಎರಡು ಕುಟುಂಬದ ನಡುವೆ ಡಿಶ್ಯುಂ… ಡಿಶ್ಯುಂ | ವಿಡಿಯೋ ವೈರಲ್

indian marriag
21/08/2021

ಚೆನ್ನೈ: ಮದುವೆ ಆಗುವವರಿಗಿಂತಲೂ ಮದುವೆ ಮಾಡಿಸುವವರಿಗೆ ಅರ್ಜೆಂಟ್ ಹೆಚ್ಚು. ಯುವಕನೋ, ಯುವತಿಯೋ 20 ವರ್ಷಕ್ಕೆ ಕಾಲಿಡುವಾಗಲೇ ಮದುವೆಯಾಗು ಎಂದು ಒತ್ತಾಯಿಸಲು ಮನೆಯವರು ಆರಂಭಿಸುತ್ತಾರೆ. ಆದರೆ ಇದು ಇಲ್ಲಿಗೆ ಮುಗಿಯಿತೇ? ಹೇಗೋ ಮದುವೆಗೆ ಒಪ್ಪಿಕೊಂಡು ಕಲ್ಯಾಣ ಮಂಟಪಕ್ಕೆ ತೆರಳಿದರೆ, ಮುಹೂರ್ತ ಮೀರುತ್ತೆ, ಅಂತ ಅಲ್ಲಿಯೂ ಅರ್ಜೆಂಟ್… ಇದೆಲ್ಲ ಯಾಕೆ ಹೇಳಬೇಕಾಯಿತು ಅಂದರೆ, ತಮಿಳುನಾಡಿನಲ್ಲಿ ಮದುವೆ ಮಾಡಿಸಲು ಬಂದ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಎರಡೂ ಕುಟುಂಬಸ್ಥರು ಮದುವೆ ಮಾಡಿಸುವ ಅರ್ಜೆಂಟ್ ನಲ್ಲಿ ಭರ್ಜರಿ ಫೈಟ್ ಮಾಡಿದ್ದಾರೆ.

ತಮಿಳುನಾಡಿನ ಕುಂದ್ರತ್ತೂರಿನ ಮುರುಗನ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಎರಡು ಕುಟುಂಬಗಳು ಪರಸ್ಪರ ಹೊಡೆದಾಡುತ್ತಿರುವ ದೃಶ್ಯ ಇದೀಗ ನೆಟ್ಟಿಗರಿಗೆ ಭರ್ಜರಿ ಮನರಂಜನೆ ನೀಡಿದೆ. ನೂರಾರು ಜನರ ನಡುವೆ ನೂಕಾಟ, ಎಳೆದಾಟ, ಪಂಚ್ ಗಳು, ತಪರಾಕಿಗಳು ಹೀಗೆ ವಿವಿಧ ರೀತಿಯ ಗ್ರಾಮೀಣ ಯುದ್ಧ ಕಲೆಗಳ ಫೈಟ್ ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪರಸ್ಪರ ಹೊಡೆದಾಡುವ ಮೂಲಕ ಕಾನೂನು ಮಾತ್ರವಲ್ಲದೇ ಕೊರೊನಾ ನಿಯಮಗಳನ್ನೂ ಉಲ್ಲಂಘಿಸಲಾಗಿದೆ. ಮುಖ್ಯವಾಗಿ ಮಾಸ್ಕ್ ಹಾಕಿಲ್ಲ, ದೈಹಿಕ ಅಂತರ ಕಾಪಾಡಿಲ್ಲ. ದೈಹಿಕ ಅಂತರ ಕಾಪಾಡಿಕೊಂಡು ಅದು ಹೇಗೆ ಫೈಟ್ ಮಾಡುವುದು ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ಕೂಡ ಇಲ್ಲ. ಒಟ್ಟಿನಲ್ಲಿ ನಮ್ಮ ಜೋಡಿಗೆ ಮೊದಲು ಮದುವೆ ನಡೆಯ ಬೇಕು ಅಂತಾ, ಎರಡು ಕುಟುಂಬಗಳು ಪರಸ್ಪರ ದೇವಸ್ಥಾನಗಳಲ್ಲಿ ಘರ್ಷಣೆ ನಡೆಸಿಕೊಂಡಿದ್ದಾರೆ.

ಒಂದು ಕುಟುಂಬಸ್ಥರು ನಮ್ಮ ಕುಟುಂಬದ ಮದುವೆ ಮೊದಲು ನಡೆಯಬೇಕು ಎಂದು ಇನ್ನೊಂದು ಕುಟುಂಬದ ವಧುವನ್ನು ಹಿಡಿದುಕೊಂಡು ಎಳೆದಾಡಲು ಆರಂಭಿಸಿದ್ದಾರೆ. ಈ ವೇಳೆ ವಧುವನ್ನು ಅವರ ಕೈಯಿಂದ ಬಿಡಿಸಲು ಹೋದ ವರನಿಗೆ ನಾಲ್ಕೇಟು ಬಿಗಿದು ತಳ್ಳಿ ಹಾಕಿದ್ದಾರೆ. ಹೀಗೆ 21 ಸೆಕೆಂಡ್ ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನೂ ಒಳ್ಳೆಯ ಮುಹೂರ್ತ ಎಂದು ಅರ್ಚಕರು ಒಂದೇ ಸಮಯವನ್ನು ನೀಡಿದ್ದರಿಂದ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮದುವೆಯ ಸಂಭ್ರಮದಲ್ಲಿದ್ದ ವಧುವರ ಕಾದಾಟಕ್ಕೆ ನಿಲ್ಲುವಂತಾಗಿರುವುದು ಮಾತ್ರ ವಿಪರ್ಯಾಸವಾಗಿದೆ. ಮದುವೆಯ ಸಂದರ್ಭದಲ್ಲಿ ಶುಭ ಮುಹೂರ್ತ ಹುಡುಕುವುದಕ್ಕಿಂತಲೂ ಒಂದು ಒಳ್ಳೆಯ ಸ್ಥಳ ಹುಡುಕಿದ್ದರೆ,ಇಷ್ಟೆಲ್ಲ ಸಮಸ್ಯೆಗಳೇ ಆಗುತ್ತಿರಲಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಅಭಿಪ್ರಾಯಪಡುತ್ತಿದ್ದಾರೆ.




ಇನ್ನಷ್ಟು ಸುದ್ದಿಗಳು…

ಕೊಲೆ ಆರೋಪಿ ವಿನಯ್ ಕುಲಕರ್ಣಿ ಜಾಮೀನಿನಲ್ಲಿ ಬಿಡುಗಡೆ | ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

“ಐ ಲವ್ ತಾಲಿಬಾನ್” ಎಂದು ಕಮೆಂಟ್ ಮಾಡಿ, ವಿವಾದ ಸೃಷ್ಟಿಸಿದ ಯುವಕ!

ಹೊಟ್ಟೆಯ ಕೊಬ್ಬನ್ನು ಅತ್ಯಂತ ಸುಲಭವಾಗಿ ಕರಗಿಸುವುದು ಹೇಗೆ ಗೊತ್ತಾ?

ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಅವಘಡ | ಯುವತಿ ಸೇರಿದಂತೆ ಇಬ್ಬರು ಸಾವು

ಗುಂಪುಗೂಡಬಾರದು ಎನ್ನುತ್ತಲೇ ಬಿಜೆಪಿ ಜನಾಶೀರ್ವಾದ ಜಾತ್ರೆಯ ಬಗ್ಗೆ ಮೌನ ವಹಿಸಿದ ಸಿಎಂ ಬೊಮ್ಮಾಯಿ

ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು

ಇತ್ತೀಚಿನ ಸುದ್ದಿ