“ನಾವು ತಯಾರಾಗಿದ್ದೇವೆ ಎನ್.ಇ.ಪಿ ಬಗ್ಗೆ ಚರ್ಚೆಗೆ ನೀವು ತಯಾರಾಗಿದ್ದೀರಾ?”: ಕ್ಯಾಂಪಸ್ ಫ್ರಂಟ್ ಭಿತ್ತಿಪತ್ರ ಪ್ರದರ್ಶನ
ಬೆಳ್ತಂಗಡಿ : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ರವರು ಎನ್.ಇ.ಪಿ ಯಲ್ಲಿ ಲೋಪದೋಷಗಳಿದ್ದರೆ ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ ಸವಾಲನ್ನು ಸ್ವೀಕರಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ನಾವು ಚರ್ಚೆಗೆ ತಯಾರಾಗಿದ್ದೇವೆ!! ನೀವು ತಯಾರಾಗಿದ್ದೀರಾ?? ಎಂಬ ಭಿತ್ತಿಪತ್ರ ಪ್ರದರ್ಶನ ಮಾಡುವ ಮುಖಾಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಖಾಸಗೀಕರಣ, ಕೇಂದ್ರೀಕರಣ ಹಾಗೂ ಕೇಸರೀಕರಣಕ್ಕೆ ಒತ್ತನ್ನು ನೀಡುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ ಈ ಬಗ್ಗೆ ಇರುವ ಚರ್ಚೆಗೆ ಮುಕ್ತವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಿದ್ದವಿದೆ, ಉನ್ನತ ಶಿಕ್ಷಣ ಸಚಿವರು ತಯಾರಾಗಿದ್ದೀರಾ? ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಯಾಸೀನ್ ಬಂಗೇರಕಟ್ಟೆ ಪ್ರಶ್ನಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಂಗೇರಕಟ್ಟೆ, ಪಾಂಡವರಕಲ್ಲು, ಮದ್ದಡ್ಕ, ಸುನ್ನತ್ಕೆರೆ, ಪಡಂಗಡಿ, ಕಾವಳಕಟ್ಟೆ, ಉಜಿರೆ, ಕುಂಟಿನಿ ಮುಂತಾದ ಸ್ಥಳಗಳಲ್ಲಿ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಶಹೀರ್, ಕೋಶಾಧಿಕಾರಿ ಝಾಹೀದ್, ಜಿಲ್ಲಾ ಸಮಿತಿ ಸದಸ್ಯರಾದ ಸಹಝಾದ್ , ಸಿನಾನ್, ಹಾಗೂ ಏರಿಯಾ ಮತ್ತು ಯೂನಿಟ್ ನಾಯಕರು ಉಪಸ್ಥಿತರಿದ್ದರು.
ಇನ್ನಷ್ಟು ಸುದ್ದಿಗಳು…
ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿ ಶೋರೂಂ ಉದ್ಘಾಟಿಸಿದ ಸಚಿವ! | ಜಗತ್ತಿನಲ್ಲೇ ಇದು ಮೊದಲು!
ಗ್ಯಾಸ್, ತೈಲ ಬೆಲೆ ಏರಿಕೆಗೆ ತಾಲಿಬಾನ್ ಕಾರಣ ಎಂದ ಶಾಸಕ ಅರವಿಂದ್ ಬೆಲ್ಲದ್!
ತ್ರಿಸ್ಟಾರ್ ಹೊಟೇಲ್ ನಲ್ಲಿ 8 ತಿಂಗಳು ತಂಗಿದ | 25 ಲಕ್ಷ ರೂ. ಬಿಲ್ ಆದ ಬಳಿಕ ಆತ ಮಾಡಿದ್ದೇನು ಗೊತ್ತಾ?
ಭಾಷಣದ ವೇಳೆ ಊಟಕ್ಕೆ ಮುಗಿಬಿದ್ದ ಮಹಿಳಾ ಕಾರ್ಯಕರ್ತೆಯರು | ಬೇಸರ ವ್ಯಕ್ತಪಡಿಸಿದ ದೇವೇಗೌಡರು
ರಾತ್ರಿ 3 ಗಂಟೆಗೆ ಎದ್ದು ಎದೆಯನ್ನು ಒತ್ತಿ ಹಿಡಿದಂತಾಗುತ್ತಿದೆ ಎಂದು ಅಮ್ಮನಿಗೆ ಹೇಳಿದ್ದ ಸಿದ್ಧಾರ್ಥ್ ಶುಕ್ಲಾ
ಕೈಕೊಟ್ಟ ಕೇಂದ್ರ ಸರ್ಕಾರ: ಈ ಪ್ರಮುಖ 10 ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಯಾಗಿಲ್ಲ!