ನಕ್ಸಲ್ ರವೀಂದ್ರ ಶರಣು: ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾದ ನಕ್ಸಲ್ ರವೀಂದ್ರ - Mahanayaka

ನಕ್ಸಲ್ ರವೀಂದ್ರ ಶರಣು: ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾದ ನಕ್ಸಲ್ ರವೀಂದ್ರ

raveendra
01/02/2025

ಚಿಕ್ಕಮಗಳೂರು: ನಕ್ಸಲ್ ಶರಣಾಗತಿ ಹಿನ್ನೆಲೆ, ಚಿಕ್ಕಮಗಳೂರು ಎಸ್ಪಿ ಕಚೇರಿಗೆ ನಕ್ಸಲ್ ರವೀಂದ್ರ ಆಗಮಿಸಿದ್ದು, ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾಗಿದ್ದಾರೆ.


Provided by

ನಾಗರೀಕ ಶಾಂತಿಗಾಗಿ ವೇದಿಕೆ ಸದಸ್ಯರ ಜೊತೆ ಆಗಮಿಸಿದ ರವೀಂದ್ರ , ಎಸ್ಪಿ ವಿಕ್ರಂ ಅಮಟೆ ಮುಂದೆ ಹಾಜರಾಗಿದ್ದು, ಒಂದೂವರೆ ದಶಕದ ನಕ್ಸಲ್ ಹೋರಾಟಕ್ಕೆ ವಿದಾಯ ಹೇಳಿದ್ದು, ಮುಖ್ಯವಾಹಿನಿಗೆ ಆಗಮಿಸಿದ್ದಾರೆ.

ಜಿಲ್ಲೆಯಲ್ಲಿ ರವೀಂದ್ರ ಮೇಲೆ 14 ಕೇಸ್ ಗಳಿವೆ, ಒಂದೂವರೆ ದಶಕದಿಂದ ಭೂಗತರಾಗಿದ್ದ ರವೀಂದ್ರ ಇದೀಗ ನಕ್ಸಲ್ ಶರಣಾಗತಿಯ ಭಾಗವಾಗಿ ಪೊಲೀಸರಿಗೆ ಶರಣಾಗಿದ್ದಾರೆ.
ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಜ.8ರಂದು ಮುಖ್ಯವಾಹಿನಿಗೆ ಬಂದಿತ್ತು.


Provided by

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಎಲ್ಲರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ