ಈ ನಾಯಕರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ | ಮಲ್ಲಿಕಾರ್ಜುನ ಖರ್ಗೆ ಹೀಗೆ ಹೇಳಿದ್ದು ಯಾರಿಗೆ? - Mahanayaka

ಈ ನಾಯಕರು ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ | ಮಲ್ಲಿಕಾರ್ಜುನ ಖರ್ಗೆ ಹೀಗೆ ಹೇಳಿದ್ದು ಯಾರಿಗೆ?

20/11/2020

ಬೆಂಗಳೂರು: ಈ ನಾಯಕರು ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದು,  ಪಕ್ಷದ ನಾಯಕರ ವಿರುದ್ಧವೇ ಮಾತನಾಡಿರುವುದು ನೋವನ್ನುಂಟು ಮಾಡಿದೆ ಎಂದು ಅವರು ಹೇಳಿದರು.

 ಕೆ‍ಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಡೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಮ್ಮ ಬೆನ್ನ ಹಿಂದಿವೆ. ಇನ್ನೊಂದು ಕಡೆ ಆಂತರಿಕ ಭಿನ್ನಾಭಿಪ್ರಾಯ ಮತ್ತು ಕಿತ್ತಾಟ ನಡೆದಿದೆ. ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಾ ಹೋದರೆ ನಾವು ಮುನ್ನಡೆಯಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತ ನಾಶವಾದರೆ, ನಾವೆಲ್ಲ ನಾಶವಾಗುತ್ತೇವೆ ಎಂದು ಖರ್ಗೆ ಎಚ್ಚರಿಸಿದರು.

 ಗಾಂಧಿ ಪರಿವಾರ ಮತ್ತು ನಾಯಕತ್ವವನ್ನು ಟೀಕಿಸುತ್ತಿರುವವರು ತಾವಿರುವ ಪ್ರದೇಶದಲ್ಲಿ ಒಬ್ಬ ಕಾರ್ಪೋರೇಟರ್ ಅನ್ನು ಗೆಲ್ಲಿಸುವ ಶಕ್ತಿ ಹೊಂದಿಲ್ಲ. ಪಕ್ಷ ಸುಸ್ಥಿತಿಯಲ್ಲಿ ಇದ್ದಾಗ ಎಲ್ಲರೂ ಹೊಗಳುತ್ತಾರೆ. ಸೋತಾಗ ಅದಕ್ಕೆ ರಾಹುಲ್‌ ಗಾಂಧಿ, ಸೋನಿಯಾಗಾಂಧಿ ಕಾರಣರೆಂದು ಗೂಬೆ ಕೂರಿಸುತ್ತಾರೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ