ನಾಯಕತ್ವ ಬದಲಾವಣೆಯ ಬಗ್ಗೆ ಸಚಿವ ಸುರೇಶ್ ಕುಮಾರ್ ಏನಂದ್ರು ಗೊತ್ತಾ?

ಚಾಮರಾಜನಗರ: ನಮ್ಮ ಮುಂದೆ ಕೋವಿಡ್ ನಿಯಂತ್ರಣವೊಂದೇ ಈಗ ಇರುವ ಗುರಿ. ಇದನ್ನು ಬಿಟ್ಟು ನಾಯಕತ್ವ ಬದಲಾವಣೆ ಸೇರಿ ಬೇರೆ ಯಾವುದೇ ಗುರಿಗಳಿಲ್ಲ ಎಂದು ಸಚಿವ ಎಸ್. ಸುರೇಶಕುಮಾರ್ ತಿಳಿಸಿದರು.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಮುಂದೆ ಕೋವಿಡ್ ನಿಯಂತ್ರಣ ಬಿಟ್ಟು ಬೇರೆ ಯಾವುದೇ ಗುರಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದರು.
ಆಕ್ಸಿಜನ್ ಸೌಲಭ್ಯ ಅಳವಡಿಸಿದ ಉಚಿತ ಬಸ್ ಸೇವೆಗೆ ಚಾಲನೆ ಬೆಂಗಳೂರಿನ ಲಯನ್ಸ್ ಕ್ಲಬ್, ಫ್ಯಾಮಿಲಿ ಆಂಡ್ ಫ್ರೆಂಡ್ಸ್ ಆಫ್ ಇಂಡಿಯಾ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಕೊರೊನಾ ಸೋಂಕಿತರಿಗಾಗಿ ನೀಡಲಾಗುತ್ತಿರುವ ಆಕ್ಸಿಜನ್ ಸೌಲಭ್ಯ ಅಳವಡಿಸಿದ ಉಚಿತ ಬಸ್ ಸೇವೆಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಸ್ ನಲ್ಲಿ 8 ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳಿದ್ದು ಗುಂಡ್ಲುಪೇಟೆ ತಾಲ್ಲೂಕು ಆಸ್ಪತ್ರೆಯ ಮುಂದೆ ನಿತ್ಯ ಬಸ್ ಇರಲಿದೆ. ಆಕ್ಸಿಜನ್ ಬೆಡ್ ಖಾಲಿ ಇಲ್ಲದೇ ಇರುವಂತಹ ಸಂದರ್ಭದಲ್ಲಿ ರೋಗಿಗಳಿಗೆ ಈ ಬಸ್ ನಲ್ಲಿ ಆಕ್ಸಿಜನ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.