“ನಾಯಕತ್ವ ಬದಲಾವಣೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲ್!” - Mahanayaka

“ನಾಯಕತ್ವ ಬದಲಾವಣೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲ್!”

naleen kumar kateel bsy
19/07/2021

ಬೆಂಗಳೂರು:  ರಾಜ್ಯದಲ್ಲಿ ನಿನ್ನೆ ರಾತ್ರಿಯಿಂದಲೇ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗಿದ್ದು, ಈ ವಿಚಾರವಾಗಿ ಕಾಂಗ್ರೆಸ್ ಇದೀಗ ಪ್ರತಿಕ್ರಿಯಿಸಿದ್ದು, ನಾಯಕತ್ವ ಬದಲಾವಣೆಯ ಸೂತ್ರದಾರ ನಳಿನ್ ಕುಮಾರ್ ಕಟೀಲ್ ಎಂದು ಆರೋಪಿಸಿದೆ.

ಮುಖ್ಯಮಂತ್ರಿ ಯಡಿಯೂರಪ್ಪರ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್ ಸಾದಿಕ್ ಯಾರೆನ್ನುವುದು ಈಗ ತಿಳಿದಿದೆ ಎಂದು ಕಾಂಗ್ರೆಸ್ ಹೇಳಿದ್ದು, ಬಿಎಸ್ ವೈ ವಿರುದ್ಧ ಟೀಕೆ ಮಾಡುತ್ತಿರುವವರ ಮೇಲೆ ನಳಿನ್ ಕುಮಾರ್ ಕಟೀಲ್ ಇದೇ ಕಾರಣಕ್ಕೆ ಕ್ರಮಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಸಿಎಂ ವಿರುದ್ಧ ನಿರಂತರವಾಗಿ ಯತ್ನಾಳ್ ವಾಗ್ದಾಳಿ ನಡೆಸುತ್ತಿದ್ದರೂ ಪಕ್ಷದ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಯಾವುದೇ ಕ್ರಮಕೈಗೊಂಡಿರಲಿಲ್ಲ. ಸಚಿವ ಯೋಗೇಶ್ವರ್ ವಿರುದ್ಧವೂ ಕ್ರಮಕೈಗೊಂಡಿರಲಿಲ್ಲ. ಏಕೆಂದರೆ ಈ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲ್  ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇನ್ನಷ್ಟು ಸುದ್ದಿಗಳು:

ಏನಿದು ನಳಿನ್ ಕುಮಾರ್ ಆಡಿಯೋ ರಹಸ್ಯ? | ನಿನ್ನೆಯಿಂದ ನಡೆದ ಬೆಳವಣಿಗೆ ಏನು?

ಮಹಿಳೆಗೆ ಥಳಿಸಿ, ಮೈಮೇಲೆ ಕುಳಿತು ಕಿರುಕುಳ ನೀಡಿದ ಸಬ್ ಇನ್ಸ್ ಪೆಕ್ಟರ್!

ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಣ: ಯುವತಿ ಕಿರುಚಿದಾಗ ಆರೋಪಿ ಪರಾರಿ

ಸೆಲ್ಫಿ ತೆಗೆಯುವ ವೇಳೆ ಭಾರೀ ಆಳದ ಜಲಪಾತಕ್ಕೆ ಬಿದ್ದ ಇನ್ಸ್ ಸ್ಟಾ ಸೆಲೆಬ್ರೆಟಿ\

ಸಾಮಾನ್ಯ ಸಭೆಯ ವೇಳೆ ಗ್ರಾ.ಪಂ. ಸದಸ್ಯೆಯ ಕೈಗೆ ಕಚ್ಚಿದ ಜವಾನ!

ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿದರೂ, ಆತನ ಪ್ರೀತಿಗೆ ಕರಗಿ ಮಗಳ ಕೊಟ್ಟು ಮದುವೆ ಮಾಡಿದರು!

ಇತ್ತೀಚಿನ ಸುದ್ದಿ