ಸುಳ್ಳು ಡಿವೋರ್ಸ್ ಕಥೆಗೆ ಫೋಟೋ ಮೂಲಕ ಉತ್ತರ ನೀಡಿದ ನಯನತಾರಾ - ವಿಘ್ನೇಶ್ ಶಿವನ್ - Mahanayaka

ಸುಳ್ಳು ಡಿವೋರ್ಸ್ ಕಥೆಗೆ ಫೋಟೋ ಮೂಲಕ ಉತ್ತರ ನೀಡಿದ ನಯನತಾರಾ — ವಿಘ್ನೇಶ್ ಶಿವನ್

nayanthara
08/03/2024

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಬಗ್ಗೆ ಪ್ರತಿನಿತ್ಯ ಏನಾದರೊಂದು ವದಂತಿಗಳು ಹಬ್ಬುತ್ತಲೇ ಇವೆ. ಕೆಲವು ದಿನಗಳ ಹಿಂದೆ ಪ್ರಮುಖ ಮಾಧ್ಯಮಗಳಲ್ಲಿ ಹರಡಿದ ವದಂತಿಯೊಂದಕ್ಕೆ  ನಯನತಾರಾ ಹಾಗೂ ವಿಘ್ನೇಶ್ ಶಿವನ್ ಒಂದು ಫೋಟೋದ ಮೂಲಕ ಉತ್ತರ ನೀಡಿದ್ದಾರೆ.

ಹೌದು..! ಕಳೆದ ಕೆಲವು ದಿನಗಳಿಂದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ದಾಂಪತ್ಯ ಜೀವನ ಹದಗೆಟ್ಟಿದೆ, ಅವರು ವಿವಾಹ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದ್ರೆ, ಇದೀಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವಿದೇಶ ಪ್ರಯಾಣಕ್ಕೆ ತೆರಳುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ನಯನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಇನ್ ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದೇ ಇಷ್ಟೆಲ್ಲ ವದಂತಿ ಹರಡಲು ಕಾರಣವಂತೆ, ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿದ್ದಷ್ಟಕ್ಕೆ ದಂಪತಿ ಬೇರೆ ಬೇರೆಯಾಗುತ್ತಾರೆ ಎಂಬ ಲಾಜಿಕ್ ಇಟ್ಟುಕೊಂಡು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

ಆರಂಭದಿಂದಲೂ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿಯ ಮೇಲೆ ಸಾಕಷ್ಟು ಜನರ ಕಣ್ಣಿತ್ತು. ಅವರ ವಿವಾಹ ಸಂದರ್ಭದಲ್ಲೂ ಸಾಕಷ್ಟು ವಿವಾದಗಳನ್ನು ಎಬ್ಬಿಸಿ, ನೆಮ್ಮದಿ ಕೆಡಿಸಲಾಗಿತ್ತು. ಇದೀಗ ಮತ್ತೆ ಡಿವೋರ್ಸ್ ಕತೆಗಳನ್ನು ಕೂಡ ಹರಿಯಬಿಡಲಾಗಿತ್ತು. ಅಂತಿಮವಾಗಿ ಈ ಜೋಡಿ ಪ್ರೀತಿಯಿಂದಲೇ ಇದ್ದಾರೆ ಎನ್ನುವ ಸಂದೇಶವನ್ನು ಫೋಟೋದ ಮೂಲಕ ಸಾರಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ