ನಾಯಿಗೆ ಬಲೂನ್ ಕಟ್ಟಿ ಗಾಳಿಯಲ್ಲಿ ತೇಲಿಬಿಟ್ಟ ಯೂಟ್ಯೂಬರ್ ಅರೆಸ್ಟ್

youtuber gaurav sharma
27/05/2021

ನವದೆಹಲಿ: ನಾಯಿಯ ಕುತ್ತಿಗೆಗೆ ಹಿಲಿಯಂ ಗ್ಯಾಸ್ ಬಲೂನ್ ಕಟ್ಟಿ ಗಾಳಿಯಲ್ಲಿ ಹಾರಾಡುವಂತೆ ಯೂಟ್ಯೂಬ್‍ ನಲ್ಲಿ ವಿಡಿಯೋ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೌರವ್ ಶರ್ಮಾ ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದು,  ಯೂಟ್ಯೂಬ್‍ನಲ್ಲಿ 4.15 ಲಕ್ಷಕ್ಕೂ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಈತ ಕೃತ್ಯ ನಡೆಸಿದ್ದು, ತಮ್ಮ ಸಾಕು ನಾಯಿ ಕುತ್ತಿಗೆಗೆ ಹಿಲಿಯಂ ಗ್ಯಾಸ್ ಬಲೂನ್ ಕಟ್ಟಿ ಗಾಳಿಯಲ್ಲಿ ತೇಲುವಂತಹ ವಿಡಿಯೋ ಹಾಕಿದ್ದ.

ನಾಯಿಗೆ ಕಟ್ಟಿದ ಬಲೂನ್‍ಗಳು ಹೊಡೆದು ನಾಯಿ ಪೊದೆಯೊಂದರಲ್ಲಿ ಬಿದ್ದಿತ್ತು. ಇದು ಪ್ರಾಣಿಹಿಂಸೆ ಎಂದು ಪರಿಗಣಿಸಿರುವ ಪೊಲೀಸರು ಶರ್ಮನನ್ನು ಬಂಧಿಸಿ ಆತನ ವಿರುದ್ಧ ಕ್ರಮ ಜರುಗಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version