“ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸ್ಬೇಕು ಹೋಗಲು ಬಿಡಿ ಸರ್…” - Mahanayaka
3:17 AM Wednesday 11 - December 2024

“ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸ್ಬೇಕು ಹೋಗಲು ಬಿಡಿ ಸರ್…”

weekend curfew
09/01/2022

ಬೆಂಗಳೂರು:  ವೀಕೆಂಡ್ ಕರ್ಫ್ಯೂ ನಡುವೆ ವ್ಯಕ್ತಿಯೋರ್ವ ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸಲು ಹೊರಟ ಘಟನೆಯೊಂದು ನಡೆದಿದ್ದು, ಈ ವೇಳೆ ಪೊಲೀಸರೊಂದಿಗೆ ಯುವಕ ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ನಡೆಸಿದ್ದರು. ಆದರೆ, ಈ ವೇಳೆ ಬೈಕ್ ನಲ್ಲಿ ಎರಡು ನಾಯಿ ಮರಿಗಳನ್ನು ತಂದ ವ್ಯಕ್ತಿಯೋರ್ವನನ್ನು ಪೊಲೀಸರು ತಡೆದು, ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ, ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಇಂದೇ ಹೋಗಬೇಕಾ? ನಾಳೆ ಹೋದರಾಗುವುದಿಲ್ಲವೇ? ಎಂದು ಪೊಲೀಸರು ಪ್ರಶ್ನಿಸಿದಾಗ ಇಲ್ಲ, ಮೂರು ಘಂಟೆಗೊಮ್ಮೆ ನಾಯಿಗಳಿಗೆ ಫೀಡ್ ಮಾಡಬೇಕು ಬಿಡಿ ಎಂದು ವ್ಯಕ್ತಿ ವಾದ ಮಾಡಿದ್ದಾರೆ. ಕೊನೆಗೆ ಪೊಲೀಸರು ಆ ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರು: ದೈವ ನಿಂದನೆಯ ಮತ್ತೊಂದು ವಿಡಿಯೋ ವೈರಲ್!

ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಖರ್ಗೆ

ಕೊರಗ ಸಮುದಾಯದ ಕ್ಷಮೆಯಾಚಿಸಿದ ಮುಸ್ಲಿಮ್ ವರ

ನರ್ಸ್ ಗೆಟಪ್ ನಲ್ಲಿ ಬಂದು ಮಗುವನ್ನು ಕದ್ದೊಯ್ದ ಮಹಿಳೆ

31ನೇ ವಯಸ್ಸಿನಲ್ಲೇ ನಿಗೂಢವಾಗಿ ಸಾವನ್ನಪ್ಪಿದ ನಟಿ: ಅಭಿಮಾನಿಗಳಿಗೆ ಶಾಕ್

 

ಇತ್ತೀಚಿನ ಸುದ್ದಿ