ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಕರಿಚಿರತೆ: ವೈರಲ್ ವಿಡಿಯೋ - Mahanayaka
1:28 PM Thursday 12 - December 2024

ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಕರಿಚಿರತೆ: ವೈರಲ್ ವಿಡಿಯೋ

07/03/2021

ಬೆಂಗಳೂರು: ಸದ್ಯ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಾಡನ್ನು ನಾಶ ಮಾಡಿದ ಪರಿಣಾಮದಿಂದ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಇದೇ ಸಂದರ್ಭಗಳಲ್ಲಿ ವಿವಿಧ ಕಡೆಗಳಲ್ಲಿ  ಚಿರತೆ ದಾಳಿಗಳು ಮೊದಲಾದ ಪ್ರಕರಣಗಳು ಕಂಡು ಬರುತ್ತಲೇ ಇದೆ. ಮನುಷ್ಯ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಡೆಯುತ್ತಿರುವ ನಡುವೆಯೇ ಇಲ್ಲೊಂದು ಘಟನೆ ಜನರನ್ನು ಬೆಚ್ಚಿ ಬೀಳಿಸಿದೆ.

ಸುಧಾ ರಮಣ್ ಎಂಬ ಐಎಫ್ ಎಸ್ ಅಧಿಕಾರಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುಗೆ ಎದೆಯನ್ನು ಝಲ್ಲೆನಿಸಿ ಬಿಟ್ಟಿದೆ. ಈ ವಿಡಿಯೋ ಈಗಾಗಲೇ ಸುಮಾರು 34 ಸಾವಿರಕ್ಕೂ ಅಧಿಕ ಮಂದಿ ಕೆಲವೇ ಗಂಟೆಗಳಲ್ಲಿ ವೀಕ್ಷಿಸಿದ್ದಾರೆ.

ಜನವಸತಿ ಪ್ರದೇಶದ ಗುಡ್ಡಗಾಡಿನಂತೆ ಕಂಡು ಬರುವ ಪ್ರದೇಶಕ್ಕೆ ರಾತ್ರಿ ದೈತ್ಯ ಕರಿಚಿರತೆಯೊಂದು ಬಂದಿದೆ. ಮನೆಯ ಹೊರಗಡೆ ಮಲಗಿದ್ದ ಬಿಳಿ ಬಣ್ಣದ ನಾಯಿಯನ್ನು ಹಿಡಿದ ಚಿರತೆ ಎಳೆದುಕೊಂಡು ಓಡಿ ಹೋಗಿದೆ. ಈ ದೃಶ್ಯ ನೋಡಿದರೆ ಎಂತಹವರಾದರೂ ಬೆಚ್ಚಿ ಬೀಳುವುದು ಖಚಿತ.

ಇತ್ತೀಚಿನ ಸುದ್ದಿ