NDA ಅಂದ್ರೆ ‘ನೋ ಡೇಟಾ ಅವೈಲೇಬಲ್ ಎಂದರ್ಥ: ಶಶಿ ತರೂರ್ ವಾಗ್ದಾಳಿ

ನವದೆಹಲಿ: ಕೇಂದ್ರದ ಎನ್ ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಶಶಿ ತರೂರ್ ವಾಗ್ದಾಳಿ ನಡೆಸಿದ್ದು, ಎನ್ ಡಿಎ ಅಂದ್ರೆ ‘ನೋ ಡೇಟಾ ಅವೈಲೇಬಲ್’ ಎಂದರ್ಥ ಎಂದು ಟೀಕಿಸಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ‘ಕನ್ನಡಿಯಲ್ಲಿನ ಗಂಟು’ ಎಂದು ಕರೆದಿದ್ದಾರೆ.
ಸರ್ಕಾರ ಎಲ್ಲಾ ಯೋಜನೆಗಳ ಬಗ್ಗೆ ಮಾತನಾಡುತ್ತದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆರ್ಥಿಕತೆಯನ್ನು ಪೀಡಿಸುತ್ತಿರುವ ಬಿಕ್ಕಟ್ಟುಗಳನ್ನು ಪರಿಹರಿಸಲು ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಚುನಾವಣೆಯು ಇತರರಿಗೆ ತಮ್ಮ ವಾಕ್ಚಾತುರ್ಯವನ್ನು ತೋರಿಸಲು ಅವಕಾಶ ನೀಡುತ್ತಿದೆ. ಬರೀ ಮಾತನಾಡುವುದು ಮತ್ತು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಎಂದು ಅವರು ವಾಗ್ದಾಳಿ ನಡೆಸಿದರು.
ಹಣಕಾಸು ಸಚಿವರು ಹೇಳಿಕೊಳ್ಳುವಂತೆ ಬಡತನವು ನಿಜವಾಗಿಯೂ ಕಡಿಮೆಯಾಗಿದೆಯೇ ಎಂದು ನಿರ್ಣಯಿಸಲು ನಮಗೆ ಯಾವುದೇ ಆಧಾರವಿಲ್ಲ… NDA ಎಂದು ಸ್ಪಷ್ಟವಾಗಿ ಯಾವುದೇ ಡೇಟಾ ಲಭ್ಯವಿಲ್ಲ” ಎಂದರ್ಥ ಎಂದರು.