ತಂದೆ ಮಗ ನಡೆದುಕೊಂಡು ಹೋಗುತ್ತಿರುವಾಗ ತಂದೆಯ ಮೇಲೆ ದಾಳಿ | ಮನಸೋ ಇಚ್ಛೆ ಇರಿದು ಆರೋಪಿಗಳು ಪರಾರಿ - Mahanayaka
6:18 PM Wednesday 11 - December 2024

ತಂದೆ ಮಗ ನಡೆದುಕೊಂಡು ಹೋಗುತ್ತಿರುವಾಗ ತಂದೆಯ ಮೇಲೆ ದಾಳಿ | ಮನಸೋ ಇಚ್ಛೆ ಇರಿದು ಆರೋಪಿಗಳು ಪರಾರಿ

23/02/2021

ನೆರಿಯ:  ವ್ಯಕ್ತಿಯೋರ್ವರು ತಮ್ಮ ಮಗನೊಂದಿಗೆ ನಡೆದುಕೊಂಡು  ಹೋಗುತ್ತಿದ್ದಾಗ ದುಷ್ಕರ್ಮಿಗಳು ತಂದೆ ಮಗನ ಮೇಲೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ  ನೆರಿಯ ಕಾಡು ಎಂಬಲ್ಲಿ ನಡೆದಿದೆ.

ನೆರಿಯ ಗ್ರಾಮದ ಮಾಥ್ಯೂ ಎನ್.ಟಿ. ತನ್ನ ಪುತ್ರ ಮಿಥುನ್ ಜೊತೆಗೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಪರಿಚಿತನೇ ಆಗಿರುವ ಸೋಜೋ ಹಾಗೂ ಆತನ ತಮ್ಮ ಜೋಬಿನ್ ಮಿಥುನ್ ರನ್ನು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಈ ವೇಳೆ ತಂದೆ ಮ್ಯಾಥ್ಯೂ ಇದನ್ನು ತಡೆಯಲು ಹೋಗಿದ್ದು,  ಈ ಸಂದರ್ಭ ಆರೋಪಿಗಳು ಅವರ ಎಡ ಕೆನ್ನೆ ಹಾಗೂ  ಎಡ ಕಿವಿ ಹಾಗೂ ಕಿವಿಯ ಹಿಂಭಾಗಕ್ಕೆ, ಹೊಟ್ಟೆಗೆ ಚೂರಿಯಿಂದ ಇರಿದಿದ್ದಾರೆ.

ಗಲಾಟೆಯ ಸದ್ದು ಕೇಳಿ ಸ್ಥಳೀಯ ನಿವಾಸಿ ಬಿನೀಶ್ ಎಂಬವರು ಓಡಿ ಬಂದಿದ್ದು, ಈ ವೇಳೆ ಅವರಿಗೂ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಚೂರಿಯಿಂದ ಇರಿತಕ್ಕೊಳಗಾಗಿರುವ ಮಾಥ್ಯೂ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಖ್ಯಾತೆ ತೆಗೆದ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಅಂತರ್ಜಾಲ ಮಾಧ್ಯಮದ ಸುದ್ದಿಗಳಿಗಾಗಿ 6363101317 ನಂಬರ್ ನನ್ನು ನಿಮ್ಮ ಗ್ರೂಪ್ ಗಳಿಗೆ ಸೇರಿಸಿಕೊಳ್ಳಿ.  ಕ್ಷಣ ಕ್ಷಣದ ಮಾಹಿತಿಗಳಿಗಾಗಿ ಫೇಸ್ ಬುಕ್ ಪೇಜ್ ಗೆ ಲೈಕ್ ಮಾಡಿ.

https://www.facebook.com/mahanayaka.in

 

ಇತ್ತೀಚಿನ ಸುದ್ದಿ