ಸ್ಟುಪಿಡ್ ಇಂಡಿಯನ್ಸ್.. ನೀನು ಕಪ್ಪು ಎಂದು ನಿಂದಿಸಿದ ಸಿಂಗಪುರದ ಮಹಿಳೆಗೆ ಜೈಲು! - Mahanayaka
6:13 PM Thursday 12 - December 2024

ಸ್ಟುಪಿಡ್ ಇಂಡಿಯನ್ಸ್.. ನೀನು ಕಪ್ಪು ಎಂದು ನಿಂದಿಸಿದ ಸಿಂಗಪುರದ ಮಹಿಳೆಗೆ ಜೈಲು!

jail
23/06/2021

ಸಿಂಗಪುರ:  ಭಾರತೀಯ ಮೂಲದ ಮಹಿಳೆ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದಕ್ಕಾಗಿ 40 ವರ್ಷದ ಸಿಂಗಪುರದ ಮಹಿಳೆಯೊಬ್ಬರಿಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಭಾರತೀಯ ಮಹಿಳೆಗೆ ತಕ್ಷಣದಲ್ಲಿಯೇ ನ್ಯಾಯ ಒದಗಿಸಲಾಗಿದೆ.

ಆಯಿಷಾ ಜಾಫರ್ ಎಂಬ ಸಿಂಗಪುರದ ಮಹಿಳೆ 33 ವರ್ಷದ ಭಾರತೀಯ ಮಹಿಳೆಯನ್ನು ‘ಸ್ಟುಪಿಡ್ ಇಂಡಿಯನ್’,  ಕಪ್ಪು ಚರ್ಮ ಹೊಂದಿರುವ ಭಾರತೀಯಳು ಎಂದೆಲ್ಲ ನಿಂದಿಸಿದ್ದಳು ಎಂದು ಹೇಳಲಾಗಿದೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ  ಸಂತ್ರಸ್ತ ಮಹಿಳೆಯು ತನ್ನ ಇಯರ್‌ ಫೋನ್‌ನಲ್ಲಿ ಸಂಗೀತ ಕೇಳುತ್ತಿದ್ದಳು. ಈ ವೇಳೆ ಸಿಂಗಪುರ ಮಹಿಳೆ ಬೈಯ್ಯಲು ಆರಂಭಿಸಿದ್ದಾಳೆ. ಆಕೆಯ ವರ್ತನೆ ನೋಡಿದ ಸಂತ್ರಸ್ತ ಮಹಿಳೆ, ಮ್ಯೂಸಿಕ್ ಆಫ್ ಮಾಡಿ, ಆಕೆ ಬಯ್ಯುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಸಿಂಗಪುರದ ಮಹಿಳೆ,  ‘ನೀನು ಮತ್ತು ನಿನ್ನ ಬ್ಲಾಕ್ ಮ್ಯಾಜಿಕ್ ಮುಖ. ನಿನ್ನ ಹೃದಯವೂ ಕಪ್ಪು … ಎಲ್ಲವೂ ಕಪ್ಪು. ನಿನ್ನ ತವರು ದೇಶ ಭಾರತ, ಸಿಂಗಪುರ ಅಲ್ಲ. ಸ್ಟುಪಿಡ್ ಇಂಡಿಯನ್ಸ್.. ನೀನೊಬ್ಬಳು ಭಾರತೀಯ ಮಹಿಳೆ. ಹಾಗಾಗಿಯೇ ಕಪ್ಪಗಿದ್ದೀಯ. ನಿನ್ನ ಬಣ್ಣವನ್ನು ನಾನು ದ್ವೇಷಿಸುತ್ತೇನೆ. ನಾನು ನಿನ್ನ ಮುಖವನ್ನು ಇಷ್ಟಪಡುವುದಿಲ್ಲ’ ದೇಶಬಿಟ್ಟು ತೊಲಗು ಎಂದು ಹೇಳಿದ್ದಾಳೆ.

 

ಇತ್ತೀಚಿನ ಸುದ್ದಿ