ನೀರಿಗೆ ಇಳಿಯಬೇಡಿ ಅಂದ್ರೂ ಇಳಿದರು… | ಸಮುದ್ರದಲ್ಲಿ ಮುಳುಗಿದ ನಾಲ್ವರ ಪೈಕಿ ಓರ್ವಳು ನೀರುಪಾಲು
ಉಡುಪಿ: ನೀರಿಗೆ ಇಳಿಯಬೇಡಿ ಎಂದು ಸ್ಥಳೀಯರು ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯವಹಿಸಿ ನದಿಗೆ ಇಳಿದ ನಾಲ್ವರ ಪೈಕಿ ಓರ್ವಳು ಯುವತಿ ನೀರುಪಾಲಾಗಿರುವ ಘಟನೆ ಮಲ್ಪೆ ಕಡಲ ತೀರದಲ್ಲಿ ಭಾನುವಾರ ನಡೆದಿದ್ದು, ಮೂವರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಇಂದು ಮುಂಜಾನೆ ಕೊಡಗು ಮೂಲದ ಪ್ರವಾಸಿಗಳಾದ ಮೂವರು ಯುವತಿಯರು ಹಾಗೂ ಓರ್ವ ಯುವಕ ಮಲ್ಪೆ ಬೀಚ್ ಗೆ ಆಗಮಿಸಿದ್ದರು. ಇವರು ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಸ್ಥಳೀಯರು ನೀರಿಗೆ ಹೋಗಬೇಡಿ, ಅಪಾಯ ಇದೆ ಎಂದು ಹೇಳಿದ್ದರು. ಆದರೆ ಸ್ಥಳೀಯರ ಮಾತನ್ನು ಕೇಳದೇ ಸಮುದ್ರದಲ್ಲಿ ಮುಂದೆ ಮುಂದೆ ಸಾಗಿದ್ದು, ಈ ವೇಳೆ ನಾಲ್ವರು ಸಮುದ್ರದಲ್ಲಿ ಮುಳುಗಿದ್ದರು ಎಂದು ಹೇಳಲಾಗಿದೆ. ಈ ವೇಳೆ ಸ್ಥಳೀಯರು ಮೂವರನ್ನು ರಕ್ಷಿಸಿದ್ದಾರೆ. ಇನ್ನೋರ್ವಳು ಯುವತಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಬೀಚ್ ಸೌಂದರ್ಯ ನೀರಿಗೆ ಇಳಿಯುವಂತೆ ಪ್ರವಾಸಿಗರನ್ನು ಆಕರ್ಷಿಸುತ್ತದೆ ನಿಜ. ಆದರೆ, ಅದರಿಂದ ಉಂಟಾಗುವ ಅಪಾಯದ ಅರಿವಿಲ್ಲದೇ ನೀರಿಗೆ ಇಳಿದರೆ ದುರಂತ ತಪ್ಪಿದ್ದಲ್ಲ. ಸ್ಥಳೀಯರು ನೀರಿಗೆ ಇಳಿಯ ಬೇಡಿ ಎಂದು ಹೇಳಿದಾಗ ಪ್ರವಾಸಿಗರು ಎಚ್ಚರ ವಹಿಸಿದ್ದರೆ, ಈ ದುರಂತ ಸಂಭವಿಸುತ್ತಿರಲಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು…
ಅನಾಥ ಹುಡುಗಿಯನ್ನು ಮಗಳಂತೆ ಸಾಕಿ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಮ್ ಕುಟುಂಬ
ನಟಿ ಶಕೀಲ ಸಾವಿನ ಸುಳ್ಳು ಸುದ್ದಿ ಹರಡಿದ ಯುವಕನಿಗೆ ಅವರು ಹೇಳಿದ್ದೇನು ಗೊತ್ತಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕಠಿಣ ಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ
ಭಗತ್ ಸಿಂಗ್ ನಾಟಕದ ದೃಶ್ಯ ಅಭ್ಯಾಸ ಮಾಡುತ್ತಿದ್ದ ಬಾಲಕ ನೇಣಿನಲ್ಲಿ ಸಿಕ್ಕಿ ಹಾಕಿಕೊಂಡು ಸಾವು!