ನೀರಿನ ಬಾಟಲಿಯೇ ಬೆಂಗಳೂರಿನ ಅಪಘಾತಕ್ಕೆ ಕಾರಣವಾಯ್ತೆ? | ಅಪಘಾತದ ವೇಳೆ ನಡೆದದ್ದೇನು? - Mahanayaka
2:09 PM Wednesday 5 - February 2025

ನೀರಿನ ಬಾಟಲಿಯೇ ಬೆಂಗಳೂರಿನ ಅಪಘಾತಕ್ಕೆ ಕಾರಣವಾಯ್ತೆ? | ಅಪಘಾತದ ವೇಳೆ ನಡೆದದ್ದೇನು?

karunasagar
01/09/2021

ಬೆಂಗಳೂರು: ಸೋಮವಾರ ತಡ ರಾತ್ರಿ ನಗರದ ಕೋರಮಂಗಲದಲ್ಲಿ ಫುಟ್ಪಾತ್ ಮೇಲಿನ ಕಂಬಕ್ಕೆ ಡಿಕ್ಕಿ ಹೊಡೆದು ಒಂದೇ ಕಾರಿನಲ್ಲಿದ್ದ ಏಳು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹಲವು ಮಾಹಿತಿಗಳು ತಿಳಿದು ಬಂದಿದ್ದು, ಅಪಘಾತಕ್ಕೆ ನೀರಿನ ಬಾಟಲಿ ಕಾರಣವಾಯಿತೇ ಎನ್ನುವ ಅನುಮಾನಗಳು ಇದೀಗ ಕೇಳಿ ಬಂದಿದೆ.

ಸೋಮವಾರ ತಡ ರಾತ್ರಿ ನಡೆದ ಅಪಘಾತದಲ್ಲಿ ಶಾಸಕರ ವೈ.ಪ್ರಕಾಶ್ ಪುತ್ರ ಕರುಣಾ ಸಾಗರ್ ಸೇರಿದಂತೆ ಆತನ ಪ್ರೇಯಸಿ ಬಿಂದು, ಸ್ನೇಹಿತರಾದ ಇಶಿತಾ, ಡಾ.ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಸಾವನ್ನಪ್ಪಿದ್ದರು. ಈ ಘಟನೆ ಸಂಬಂಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ವೇಗವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ನೀರಿನ ಬಾಟಲಿಯೊಂದು ಬ್ರೇಕ್ ನ ಅಡಿ ಭಾಗದಲ್ಲಿ ಸಿಲುಕಿದ್ದು, ಈ ವೇಳೆ ಚಾಲಕ ಬ್ರೇಕ್ ಹಾಕಲು ಯತ್ನಿಸಿದರೂ ಸಾಧ್ಯವಾಗದೇ ಕಾರು ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿರುವ ಸಾಧ್ಯತೆಗಳಿವೆ ಎಂದು ಸದ್ಯ ವರದಿಯಾಗಿದೆ.

ಅಪಘಾತಕ್ಕೀಡಾಗಿರುವ ಕಾರಿನ  ಬ್ರೇಕ್ ನಡಿಯಲ್ಲಿ ನೀರಿನ ಬಾಟಲಿಯೊಂದು ಸಿಲುಕಿಕೊಂಡಿತ್ತು ಎನ್ನುವ ಮಾಹಿತಿಗಳು ಪೊಲೀಸ್ ಮೂಲಗಳಿಂದ ಲಭಿಸಿರುವುದಾಗಿ ಸದ್ಯ ವರದಿಯಾಗಿದೆ. ಇನ್ನೂ ಅಪಘಾತಕ್ಕೂ ಮೊದಲು ಕಾರಿನಲ್ಲಿದ್ದವರು ಪಾರ್ಟಿ ಮಾಡಿದ್ದರೆ? ಎನ್ನುವ ಅನುಮಾನಗಳು ಕೂಡ ಕೇಳಿ ಬಂದಿವೆ. ಅಪಘಾತಕ್ಕೂ ಮೊದಲು ಕಾರಿನಲ್ಲಿದ್ದವರು ಮದ್ಯ ಖರೀದಿ ಮಾಡಿದ್ದಾರೆ ಎನ್ನುವ ಬಗ್ಗೆಯೂ ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

ಶಾಶ್ವತ ಸೂರಿಗಾಗಿ ರಸ್ತೆಯಲ್ಲಿ 6 ಕಿ.ಮೀ. ಉದ್ದಂಡ ನಮಸ್ಕಾರ ಹಾಕಿ ದಲಿತ ಮಹಿಳೆಯರು!

ಗಾಯದ ಮೇಲೆ ಬರೆ: ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

ಮಹಿಳೆಯ ನಗ್ನ ಚಿತ್ರ ಇಟ್ಟುಕೊಂಡು ಬ್ಲ್ಯಾಕ್ ಮೇಲ್ | ಆರೋಪಿ ಅರೆಸ್ಟ್

ನ್ಯಾಯಾಲಯದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ಫೋಕ್ಸೋ ಪ್ರಕರಣದ ಆರೋಪಿ

ಪ್ರವಾಹದಲ್ಲಿ ಸಿಲುಕಿ ನವವಧು ಸೇರಿದಂತೆ 7 ಮಂದಿ ನೀರುಪಾಲು!

ಇತ್ತೀಚಿನ ಸುದ್ದಿ