ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನ ಗಾಜು ಒಡೆದು ಇಬ್ಬರ ರಕ್ಷಣೆ
ಚಿಕ್ಕಮಗಳೂರು: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಕಾರಿನ ಗಾಜು ಒಡೆದು ರಕ್ಷಿಸಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದ ಬಳಿ ನಡೆದಿದೆ.
ರಸ್ತೆಯ ಮೇಲೆ ಸುಮಾರು ಐದಾರು ಅಡಿ ನೀರು ಹರಿಯುತ್ತಿದ್ದರೂ, ಕಾರು ಚಾಲಕ ನಿರ್ಲಕ್ಷ್ಯತನದಿಂದ ನೀರಿನಲ್ಲಿಯೇ ಕಾರು ಚಲಾಯಿಸಿದ್ದಾನೆ. ಈ ವೇಳೆ ನೀರಿನ ಹರಿವಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ. ಈ ವೇಳೆ ಸ್ಥಳೀಯರು ತಕ್ಷಣವೇ ಸಮಯ ಪ್ರಜ್ಞೆ ಮೆರೆದಿದ್ದು, ಕಾರಿನ ಗಾಜು ಒಡೆದು ಜೆಸಿಬಿಗೆ ಹಗ್ಗ ಕಟ್ಟಿ ಕಾರನ್ನು ಎಳೆದು ಕಾರಿನಲ್ಲಿದ್ದ ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ.
ಕಾರಿನಲ್ಲಿದ್ದ ಇಬ್ಬರು ಕೂಡ ಅಪಾಯದಿಂದ ಪಾರಾಗಿದ್ದಾರೆ. ಸಾರ್ವಜನಿಕರು ಸಮಯ ಪ್ರಜ್ಞೆ ಮೆರೆಯದಿದ್ದರೆ, ಇಬ್ಬರ ಪ್ರಾಣಕ್ಕೂ ಅಪಾಯ ಸಂಭವಿಸುತ್ತಿತ್ತು. ಹರಿಯುವ ನೀರಿಗೆ ಸವಾಲು ಹಾಕಬಾರದು ಎಂಬ ಮಾತನ್ನು ಇನ್ನಾದರೂ ವಾಹನ ಚಾಲಕರು ಅರಿಯಬೇಕಿದೆ ಎನ್ನುವ ಮಾತುಗಳು ಸ್ಥಳೀಯರಿಂದ ಕೇಳಿ ಬಂದವು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka