ನೀರು ಬಿಸಿ ಮಾಡುವ ವೇಳೆ ಹೀಟರ್ ನಿಂದ ಶಾಕ್ ಹೊಡೆದು ಯುವತಿಯ ದಾರುಣ ಸಾವು
ರಾಯಚೂರು: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಜನರು ಬಿಸಿ ನೀರಿನ ಸ್ನಾನಕ್ಕೆ ಹೆಚ್ಚನ ಒತ್ತು ನೀಡುತ್ತಾರೆ. ಗೀಸರ್, ಹೀಟರ್ ಗಳಂತಹ ವಿದ್ಯುತ್ ಉಪಕರಣಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಇವುಗಳ ಅಪಾಯವನ್ನು ಮೊದಲು ತಿಳಿದುಕೊಳ್ಳಲೇ ಬೇಕಿದೆ. ಚಳಿಗಾಲದ ಆರಂಭದಲ್ಲಿಯೇ ಹೀಟರ್(ನೀರು ಬಿಸಿ ಮಾಡುವ ಸಾಧನ)ನಿಂದ ವಿದ್ಯುತ್ ಪ್ರವಾಹಿಸಿ ಯುವತಿಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಹೀಟರ್ ನಲ್ಲಿ ಸ್ನಾನಕ್ಕಾಗಿ ನೀರು ಕಾಯಿಸುತ್ತಿದ್ದ ವೇಳೆ ಸ್ವಿಚ್ ಆಫ್ ಮಾಡದೆಯೇ ಯುವತಿ ನೀರಿಗೆ ಕೈ ಹಾಕಿದ್ದು, ಪರಿಣಾಮವಾಗಿ ಆಕೆಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಲಿಂಗಸಗೂರು ತಾಲೂಕಿನ ಕಸಬಾ ಲಿಂಗಸೂರಿನ 23 ವರ್ಷ ವಯಸ್ಸಿನ ರೇಣುಕಮ್ಮ ಮೃತಪಟ್ಟ ಯುವತಿಯಾಗಿದ್ದಾರೆ. ವಿದ್ಯುತ್ ಪ್ರವಾಹಿಸಿದ ಬಳಿಕ ಕೂಡಲೇ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆಗಾಗಲೇ ಯುವತಿ ಸಾವನ್ನಪ್ಪಿದ್ದಾಳೆ.
ಸ್ನಾನಕ್ಕೆ ನೀರು ಬಿಸಿ ಮಾಡಲು ಗೀಸರ್, ಹೀಟರ್ ಬಳಸುವ ವೇಳೆ ಜನರು ಬಹಳ ಜಾಗೃತರಾಗಿರಬೇಕು. ಬಹಳಷ್ಟು ಜನರು ಇದರಿಂದಾಗಿ ಸಾವನ್ನಪ್ಪಿದ್ದಾರೆ. ಸ್ನಾನ ಮಾಡುವ ವೇಳೆ ಗೀಸರ್ ಆಫ್ ಮಾಡಿಯೇ ಸ್ನಾನ ಮಾಡಬೇಕು. ಹೀಟರ್ ನಲ್ಲಿ ನೀರು ಬಿಸಿ ಮಾಡಲು ಇಟ್ಟಿದ್ದರೆ, ಸ್ವಿಚ್ ಆಫ್ ಮಾಡಿಯೇ ನೀರನ್ನು ಮುಟ್ಟಬೇಕು. ಇಲ್ಲವಾದರೆ ವಿದ್ಯುತ್ ಶಾಕ್ ಹೊಡೆಯುವ ಅಪಾಯವಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಗುಳಿದ್ದನ್ನು ನೆಕ್ಕುವಂತೆ ದಲಿತ ವ್ಯಕ್ತಿಗಳ ಮೇಲೆ ದೌರ್ಜನ್ಯ: ಓರ್ವ ಅರೆಸ್ಟ್
ಈ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಪಾಸ್: ಮಾಜಿ ಸಿಎಂ ಯಡಿಯೂರಪ್ಪ
ಭಾರತದ ಹರ್ನಾಜ್ ಕೌರ್ ಸಂಧುಗೆ ಮಿಸ್ ಯುನಿವರ್ಸ್ ಕಿರೀಟ
ಡಾ.ಅಂಬೇಡ್ಕರರ ಕಣ್ಣೀರು ಒರೆಸುವ ಕೈಗಳು ಯಾರವು?
ರಾಜ್ ಕುಮಾರ ಸಿನಿಮಾ ನೋಡ್ಲೇ ಬೇಕು ಮಾಮಾ ಅಂದಿದ್ರು ಪುನೀತ್ | ಸಿದ್ದರಾಮಯ್ಯ
ತಮಿಳುನಾಡಿನಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು!