ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಲೇ ನೀರುಪಾಲಾದ ಪೊಲೀಸ್ ಅಧಿಕಾರಿ ಸಾವು - Mahanayaka
8:12 AM Saturday 21 - September 2024

ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸುತ್ತಲೇ ನೀರುಪಾಲಾದ ಪೊಲೀಸ್ ಅಧಿಕಾರಿ ಸಾವು

shreenivas rao
22/11/2021

ತಿರುಪತಿ: ಆಂಧ್ರಪ್ರದೇಶದಲ್ಲಿ ಮಳೆ ಹಾಗೂ ಪ್ರವಾಹದಿಂದ ಜನರು ತತ್ತರಿಸಿದ್ದು, ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ  ಜನರನ್ನು ರಕ್ಷಿಸುತ್ತಿರುವ ಸಂದರ್ಭದಲ್ಲಿ  ಎಸ್ ಡಿಆರ್ ಎಫ್ ಸಿಬ್ಬಂದಿಯೊಬ್ಬರು ನೀರು ಪಾಲಾಗಿ ಮೃತಪಟ್ಟ ಘಟನೆ ನಡೆದಿದೆ.

ಕೆಲ್ಲಾ ಶ್ರೀನಿವಾಸ್ ರಾವ್ ಮೃತ ಎಸ್ ಡಿಆರ್ ಎಫ್ ಸಿಬ್ಬಂದಿಯಾಗಿದ್ದಾರೆ.  ಇವರು ವಿಜಯನಗರದ ಎಸ್ ಡಿಆರ್ ಎಫ್ ತಂಡದ 5ನೇ ಬೆಟಾಲಿಯನ್ ಕಾನ್ಸ್ ಟೇಬಲ್ ಆಗಿದ್ದಾರೆ. ಜನರನ್ನು ರಕ್ಷಣೆ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಆಂಧ್ರದ ಪೊಲೀಸರು ತಿಳಿಸಿದ್ದಾರೆ.

ಇನ್ನೂ ಮಳೆ, ಪ್ರವಾಹದ ಆರ್ಭಟಕ್ಕೆ 24ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. 100ಕ್ಕೂ ಅಧಿಕ ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಮುಖ್ಯಮಂತ್ರಿ ವೈ.ಎಸ್.ಮೋಹನ್ ರೆಡ್ಡಿ ಚಿತ್ತೂರು ಮತ್ತು ಕಡಪ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಎಲ್ಲ ಜಿಲ್ಲಾಧಿಕಾರಿಗಳಿಂದ ವರದಿ ಪಡೆದುಕೊಂಡಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೈಹಿಕ ಸಂಬಂಧ ಬೆಳೆಸಿದ ಬಳಿಕ ಜಾತಕ ಸರಿ ಹೊಂದುವುದಿಲ್ಲ ಎಂದು ಮದುವೆಗೆ ನಿರಾಕರಣೆ: ಯುವಕನ ವಿರುದ್ಧ ದೂರು

ಮಂಗಳೂರು: ಬಾಲಕಿಯನ್ನು ಕೊಂದು ಚರಂಡಿಗೆಸೆದ ಪಾಪಿಗಳು!

ಕ್ಷಮೆ ಕೇಳದಿದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೆಯುತ್ತೇವೆ | ಸ್ವಾಮೀಜಿ ಎಚ್ಚರಿಕೆ

ಬಾಕಿ ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಕೈಯನ್ನೇ ಕತ್ತರಿಸಿದ ಪಾಪಿಗಳು!

ಗ್ರಾಹಕನನ್ನು ತಡೆದು, ‘ಪ್ಯಾಂಟ್ ಧರಿಸಿ ಬನ್ನಿ’ ಎಂದು ವಾಪಾಸ್ ಕಳುಹಿಸಿದ ಬ್ಯಾಂಕ್ ಸಿಬ್ಬಂದಿ!

ಗಾಂಜಾ ಮಾರಾಟ ಆರೋಪ: ಅಮೆಜಾನ್ ವಿರುದ್ಧ ದೂರು ದಾಖಲು

ಇತ್ತೀಚಿನ ಸುದ್ದಿ