ಅಸಲಿತನ: ನೀಟ್ ಮರು ಪರೀಕ್ಷೆಯಲ್ಲಿ ಬಯಲಾಯಿತು ಈ ಹಿಂದಿನ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದವರ ಬಣ್ಣ..! - Mahanayaka

ಅಸಲಿತನ: ನೀಟ್ ಮರು ಪರೀಕ್ಷೆಯಲ್ಲಿ ಬಯಲಾಯಿತು ಈ ಹಿಂದಿನ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದವರ ಬಣ್ಣ..!

01/07/2024

ನೀಟ್‌ ಮರುಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷಾ ಫಲಿತಾಂಶಗಳಲ್ಲಿ ಅವ್ಯವಹಾರ ಆರೋಪಗಳ ಬಳಿಕ ಇತ್ತೀಚೆಗೆ ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ 1563 ಅಭ್ಯರ್ಥಿಗಳಿಗಾಗಿ ಮರುಪರೀಕ್ಷೆ ನಡೆಸಿತ್ತು. ಈ ಹಿಂದೆ ಪೂರ್ಣ ಅಂಕ ಗಳಿಸಿದವರ ಬಣ್ಣ ಮರುಪರೀಕ್ಷೆಯಲ್ಲಿ ಬಯಲಾಗಿದೆ.


Provided by

ಈ ಮರುಪರೀಕ್ಷೆಗೆ ಒಟ್ಟು 813 ಅಭ್ಯರ್ಥಿಗಳು ಹಾಜರಾಗಿದ್ದು, ಉಳಿದವರು ಗ್ರೇಸ್​ ಅಂಕದ ಹೊರತಾದ ಮಾರ್ಕ್ಸ್​ ಆಯ್ಕೆ ಮಾಡಿದ್ದಾರೆ ಎಂದು ಎನ್‌ಟಿಎ ತಿಳಿಸಿದೆ. ಈ ಹಿಂದಿನ ಪರಿಕ್ಷೆಯಲ್ಲಿ ಹರಿಯಾಣದ ಒಂದೇ ಕೇಂದ್ರದಲ್ ಆರು ವಿದ್ಯಾರ್ಥಿಗಳು 720 ಅಂಕ ಗಳಿಸಿದ್ದರು. ಮರುಪರೀಕ್ಷೆಯಲ್ಲಿ ಅವರಲ್ಲಿ ಯಾರಿಗೂ ಪೂರ್ಣ ಅಂಕಗಳು ದೊರಕಿಲ್ಲ. ಇದರಿಂದ ಒಟ್ಟು ಟಾಪರ್‌ಗಳ ಸಂಖ್ಯೆ 67 ರಿಂದ 61ಕ್ಕೆ ಇಳಿಕೆಯಾಗಿದೆ.

ಮರುಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮೆಡಿಕಲ್‌ ಕೌನ್ಸೆಲಿಂಗ್‌ ಸಮಿತಿ ಕೌನ್ಸೆಲಿಂಗ್‌ ಆರಂಭಿಸುವ ನಿರೀಕ್ಷೆಯಿದೆ.
ಆರು ಪರೀಕ್ಷಾ ಕೇಂದ್ರಗಳಲ್ಲಿ ಮೇ 5ರಂದು ಪರೀಕ್ಷೆ ವಿಳಂಬದಿಂದಾಗಿ ಗ್ರೇಸ್​ ಅಂಕ ಪಡೆದ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗಿತ್ತು.
ಕಠಿಣ ಪರೀಕ್ಷೆಗಳ ಪೈಕಿ ಒಂದಾಗಿರುವ ನೀಟ್​ನಲ್ಲಿ ಈ ಬಾರಿ ಗ್ರೇಸ್​ ಮಾರ್ಕ್ಸ್ ಮತ್ತು ಪತ್ರಿಕೆ ಸೋರಿಕೆ ಘಟನೆಗಳಿಂದ ದೇಶಾದ್ಯಂತ ವಿವಾದ ಎದ್ದಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ