ಆದಷ್ಟು ಬೇಗ ನೀವು ಭಾರತದಿಂದ ಮರುಳುವುದು ಉತ್ತಮ | ಭಾರತದಲ್ಲಿರುವ ಪ್ರಜೆಗಳಿಗೆ ಅಮೆರಿಕ ಸಲಹೆ
ನವದೆಹಲಿ: ಕೊರೊನಾ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಯಾರೂ ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಆದಷ್ಟು ಬೇಗ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಕೊರೊನಾದಿಂದಾಗಿ ಭಾರತದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಗಂಭೀರವಾಗಿ ತಗ್ಗುತ್ತಿದ್ದು, ನಾಗರಿಕರು ಬೇಗ ಮರಳುವುದು ಉತ್ತಮ ಎಂದು ಅಮೆರಿಕ ನಾಗರಿಕರಿಗೆ ಅಲ್ಲಿನ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಅಮೆರಿಕ ಆರೋಗ್ಯ ಇಲಾಖೆ, ಭಾರತವನ್ನು ಬಿಟ್ಟು ಬರಲು ಇಚ್ಛಿಸುವ ನಾಗರಿಕರು ಈಗಿರುವ ವಾಣಿಜ್ಯ ಸಾರಿಗೆ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸದ್ಯಕ್ಕೆ ಭಾರತದಿಂದ ಅಮೆರಿಕಕ್ಕೆ ದಿನನಿತ್ಯ ನೇರ ವಿಮಾನವಿದೆ. ಪ್ಯಾರಿಸ್ ಹಾಗೂ ಫ್ರಾಂಕ್ಫರ್ಟ್ನಿಂದ ಆಗಮಿಸುವ ವಿಮಾನಗಳೂ ಲಭ್ಯವಿವೆ ಎಂದು ಅಮೆರಿಕ ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
ಭಾರತದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಹಲವೆಡೆ ಪರೀಕ್ಷಾ ಮಟ್ಟವೂ ಕುಸಿದಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ, ಹಾಸಿಗೆ, ಔಷಧಗಳ ಕೊರತೆ ಅಧಿಕವಾಗಿದೆ ಎಂದು ಅಮೆರಿಕ ರಾಯಭಾರಿ ಎಚ್ಚರಿಕೆ ನೀಡಿದೆ.