ಕೇಂದ್ರ ಸರ್ಕಾರವನ್ನು ರುಬ್ಬಿದ ದೆಹಲಿ ಹೈಕೋರ್ಟ್ | “ನೀವು ದುರಂತದತ್ತ ಸಾಗುತ್ತಿದ್ದೀರಿ” ಎಂದ ಕೋರ್ಟ್

ದೆಹಲಿ: ದೇಶಾದ್ಯಂತ ಜನರು ಆಮ್ಲಜನಕದ ಕೊರತೆಯಿಂದ ಸಾಯುತ್ತಿರುವ ನಡುವೆಯೇ ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ತರಾಟೆಗೆತ್ತಿಕೊಂಡಿದೆ. ಇರುವ ಆಕ್ಸಿಜನ್ ಆಕ್ಸಿಜನ್ ನ್ನು ಕೈಗಾರಿಕೆಗಳಲ್ಲಿ ಬಳಸುತ್ತಿರುವ ವಿಚಾರ ತಿಳಿದ ಕೋರ್ಟ್ ಸರ್ಕಾರದ ವಿರುದ್ಧ ತೀವ್ರ ಗರಂ ಆಗಿದೆ.
ಜನರು ಸಾಯುತ್ತಿದ್ದರೂ ನಿಮಗೆ ಕೈಗಾರಿಕೆಗಳಲ್ಲೇ ಚಿಂತೆ ಅಲ್ಲವೇ? ಜನರ ಜೀವಗಳಿಗೆ ನಿಮ್ಮ ಬಳಿ ಬೆಲೆ ಇಲ್ಲವೇ? ನೀವು ದೊಡ್ಡ ದುರಂತದತ್ತ ಸಾಗುತ್ತಿದ್ದೀರಿ ಎಂದು ಹೈಕೋರ್ಟ್ ನ ನ್ಯಾಯಾಧೀಶರು ಕಟು ವಾಕ್ಯಗಳಿಂದ ಕೇಂದ್ರ ಸರ್ಕಾರದ ಮನುವಾದಿ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನ್ಯಾಯಾಧೀಶರ ಆಕ್ರೋಶದ ನಡುವೆ ಉತ್ತರಿಸಿದ ಕೇಂದ್ರ ಸರ್ಕಾರ, ನಾವು ಆಮ್ಲಜನಕ ಆಮದು ಮಾಡಿಕೊಳ್ಳಲು ಟೆಂಡರ್ ಕರೆದಿದ್ದೇವೆ ಎಂದು ಉತ್ತರಿಸಿದೆ. ಈ ಉತ್ತರಕ್ಕೆ ಕೆಂಡಾಮಂಡಲವಾದ ಕೋರ್ಟ್, ನೀವು ನಿಮ್ಮದೇ ಆದ ರೀತಿಯಲ್ಲಿ ಸಿಹಿಯಾದ ಸಮಯವನ್ನು ಕಳೆಯಿರಿ, ಜನರು ಸತ್ತು ಹೋಗುತ್ತಾರೆ. ಆಸ್ಪತ್ರೆಗೆ ಆಮ್ಲಜನಕ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ನ್ಯಾಯಾಧೀಶರು ಸರ್ಕಾರಕ್ಕೆ ನೆನಪಿಸಿದರು.
ಆಳುವ ಸರ್ಕಾರಕ್ಕೆ ವಾಸ್ತವದ ಅರಿವಿಲ್ಲ ಎಂದು ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದ ಕೋರ್ಟ್, ಆಮ್ಲಜನಕ ಇಲ್ಲ ಎಂದು ಜನರನ್ನು ಸಾಯಲು ಬಿಡಬಾರದು, ಜನರು ಸರ್ಕಾರದ ಮೇಲೆ ಅವಲಂಬಿತವಾಗಿದ್ದಾರೆ. ನೀವು ಭಿಕ್ಷೆ ಬೇಡುತ್ತೀರೋ, ಕದಿಯುತ್ತೀರೋ, ಸಾಲ ತರುತ್ತೀರೋ ಅದು ಗೊತ್ತಿಲ್ಲ, ಜನರನ್ನು ಬದುಕಿಸುವುದು ನಿಮ್ಮ ಹೊಣೆ ಎಂದು ಮಾರ್ಮಿಕವಾಗಿ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.