“ನೀವು ರೈತರ ತಲೆ ಒಡೆದು ಹಾಕುವುದನ್ನು ನಾನು ನೋಡಬೇಕು” | ಪೊಲೀಸರಿಗೆ ಆದೇಶ ನೀಡಿದ ಅಧಿಕಾರಿ
ಚಂಡೀಗಢ: “ನೀವು ರೈತ ಪ್ರತಿಭಟನಾಕಾರರ ತಲೆ ಹೊಡೆದು ಹಾಕುವುದನ್ನು ನಾನು ನೋಡಬೇಕು ಎನ್ನುತ್ತಾ ರೈತರ ತಲೆ ಹೊಡೆಯಲು ಅಧಿಕಾರಿಯೋರ್ವ ಆದೇಶಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ರೈತರ ಮೇಲೆ ಹಿಂಸಾಚಾರ ನಡೆಸಲು ಸ್ವತಃ ಅಧಿಕಾರಿಗಳೇ ಆದೇಶ ನೀಡಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕರ್ನಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ ಯೋಜನೆ ರೂಪಿಸಿರುವುದು ಇದೀಗ ಬಯಲಿಗೆ ಬಂದಿದ್ದು, ಒಬ್ಬನೇ ಒಬ್ಬ ರೈತ ಪ್ರತಿಭಟನಾಕಾರ ನಿಮ್ಮ ಕೈಗೆ ಸಿಕ್ಕಿದರೂ, ಬಿಡಬೇಡಿ ಆತನ ತಲೆ ಹೊಡೆದು ಹಾಕಿ ಎಂಬಂತೆ ಪೊಲೀಸರಿಗೆ ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಯಾರು ಬೇಕಾದರೂ ಆಗಲಿ, ಎಲ್ಲಿಂದಲೇ ಬಂದಿರಲಿ. ಅವರಿಗೆ ಸಚಿವರನ್ನು ಮುಟ್ಟಲು ಬಿಡಬೇಡಿ. ಲಾಠಿ ಎತ್ತಿಕೊಳ್ಳಿ ಜೋರಾಗಿ ಬಾರಿಸಿ. ಒಬ್ಬ ಪ್ರತಿಭಟನಾಕಾರ ಸಿಕ್ಕಿದರೂ ಅವನ ತಲೆ ಒಡೆಯುವುದನ್ನು ನಾನು ನೋಡಬೇಕು ಎಂದು ಸಿನ್ಹಾ ಆದೇಶ ನೀಡಿದ್ದಾರೆ.
ಸಿನ್ಹಾ ವಿಡಿಯೋವನ್ನು ಪೋಸ್ಟ್ ಮಾಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಕರ್ನಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿರುದ್ಧ ಕಿಡಿಕಾರಿದ್ದು, ಇಂತಹ ಹೇಳಿಕೆಗಳು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳು…
ನಾಯಿ ಮೂತ್ರ ಮಾಡಿದ ವಿಚಾರ: ಕಾರ್ ನ ಮಾಲಿಕನಿಗೆ ನಾಯಿಯ ಮಾಲಿಕರಿಂದ ಹಿಗ್ಗಾಮುಗ್ಗಾ ಥಳಿತ!
ತಲಾಖ್ ನೀಡಿದ ಬಳಿಕವೂ ಪತ್ನಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪತಿ!
ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ
ಸಾಮೂಹಿಕ ಅತ್ಯಾಚಾರ ಪ್ರಕರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಸಹಕಾರವಾದ ಅಂಶಗಳೇನು?
ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ!
ಮೈಸೂರು: ಸಾಮೂಹಿಕ ಅತ್ಯಾಚಾರದ ಆರೋಪಿಗಳು ಇನ್ನಷ್ಟು ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆ!