ಕರ್ತವ್ಯಲೋಪ : ಶೃಂಗೇರಿ ಪಿ.ಎಸ್.ಐ. ಅಮಾನತು

13/02/2025
ಚಿಕ್ಕಮಗಳೂರು : ಹಲವು ಪ್ರಕರಣಗಳಲ್ಲಿ ಕರ್ತವ್ಯಲೋಪ ಹಿನ್ನೆಲೆ ಶೃಂಗೇರಿ ಪಿ.ಎಸ್.ಐ. ಅಮಾನತು ಮಾಡಲಾಗಿದ್ದು, ಪಶ್ಚಿಮ ವಲಯ ಐಜಿಪಿ ಸಸ್ಪೆಂಡ್ ಮಾಡಿ ಆದೇಶ ನೀಡಿದ್ದಾರೆ.
ಶೃಂಗೇರಿ ಪಿ.ಎಸ್.ಐ. ಜಕ್ಕಣ್ಣನವರ್ ಅಮಾನತ್ತಾದ ಪಿ.ಎಸ್.ಐ. ಆಗಿದ್ದಾರೆ. ಅಕ್ರಮ ಮರಳು ದಂಧೆ, ಇಸ್ಪೀಟ್ ಅಡ್ಡೆ ರೈಡ್ ಸೇರಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಈ ಆದೇಶ ಹೊರಡಿಸಲಾಗಿದೆ.
ಶೃಂಗೇರಿ ಭಾಗದಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದೆ. ಈ ಮರಳು ದಂಧೆಗೆ ಬೆಂಬಲ ನೀಡಿದ ಅರೋಪದ ಹಿನ್ನೆಲೆ ಸಸ್ಪೆಂಡ್ ಮಾಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: