ಸಂತ ಅಲ್ಪೊನ್ಸ ಚರ್ಚ್ | SMYM ಸಂಘದ ಯುವಕರಿಂದ ನೆಲ್ಯಾಡಿಯ ಪ್ರಮುಖ ಬೀದಿಗಳ ಸ್ಯಾನಿಟೈಜ್

nelyadi
14/05/2021

ನೆಲ್ಯಾಡಿ: ಕೊರೊನಾ ಎರಡನೇ ಅಲೆಯಿಂದ ರಾಜ್ಯ ತತ್ತರಿಸಿದೆ. ಇದೇ ಸಂದರ್ಭದಲ್ಲಿ ಯುವಕರು ಎಚ್ಚೆತ್ತುಕೊಂಡಿದ್ದು, ನೆಲ್ಯಾಡಿಯ ಸಂತ ಅಲ್ಪೊನ್ಸ ಚರ್ಚ್ SMYM ಸಂಘ ಕೊರೊನಾ ಹರಡದಂತೆ ನೆಲ್ಯಾಡಿಯ ಪ್ರಮುಖ ಪ್ರದೇಶಗಳನ್ನು ಸ್ಯಾನಿಟೈಜ್ ಮಾಡಿದ್ದಾರೆ.

ನೆಲ್ಯಾಡಿ ಪೇಟೆ ಮತ್ತು ಸರ್ಕಾರಿ ಕಚೇರಿಗಳು, ಅಂಗಡಿ ಮುಂಗಟ್ಟುಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಇಂದಿನಿಂದ  ಸತತ 5 ದಿನಗಳವರೆಗೆ ಯುವಕರ ತಂಡ ಈ ಕಾರ್ಯದಲ್ಲಿ ತೊಡಗಲಿದ್ದಾರೆ.

ಇನ್ನೂ ನೆಲ್ಯಾಡಿ SMYM ಯುವಕರ ಸಾಮಾಜಿಕ ಕಾಳಜಿಗೆ ಅಭಿನಂದನೆ ಸೂಚಿಸಿರುವ ಸಂತ ಅಲ್ಪೊನ್ಸ ಚರ್ಚ್ ನ ಫಾದರ್ ಆದರ್ಶ್ ಪುದಿಯೆಡ್ತ್,  ಎಲ್ಲರೂ ನಿರ್ಲಕ್ಷ್ಯ ತೋರದೆ ಕೋವಿಡ್ ಮಾರ್ಗ ಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಿ ಆದಷ್ಟು ಬೇಗ ನಮ್ಮ ಗ್ರಾಮವನ್ನು ಕೊರೊನ ಮುಕ್ತ ಮಾಡ ಬೇಕೆಂದು  ಕರೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version