ಪ್ರೀತಿಸಿದಾತನಿಗೆ ಕೊರಳೊಡ್ಡಲು ಬಿಡಲಿಲ್ಲ, ಆಕೆ ನೇಣಿಗೆ ಕೊರಳೊಡ್ಡಿದಳು! - Mahanayaka
3:10 PM Wednesday 5 - February 2025

ಪ್ರೀತಿಸಿದಾತನಿಗೆ ಕೊರಳೊಡ್ಡಲು ಬಿಡಲಿಲ್ಲ, ಆಕೆ ನೇಣಿಗೆ ಕೊರಳೊಡ್ಡಿದಳು!

13/02/2021

ನೆಲಮಂಗಲ: ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದರು ಎಂದು ನೊಂದ ಯುವತಿ ನೇಣಿಗೆ ಕೊರಳೊಡ್ಡಿದ ಹೃದಯ ವಿದ್ರಾವಕ ಘಟನೆ  ಬೆಂಗಳೂರಿನಲ್ಲಿ ನಡೆದಿದೆ.

23 ವರ್ಷದ ಶಶಿಕಲಾ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹುಣಸೆಗಟ್ಟೆಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು ಮೂಲದ ಯುವಕನನ್ನು ಶಶಿಕಲಾ ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರವಾಗಿ ಮನೆಯಲ್ಲಿ ತಡರಾತ್ರಿ ಭಾರೀ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.  ಇದಾದ ಬಳಿಕ ಶಶಿಕಲಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಮನೆಯವರ ತೀವ್ರ ವಿರೋಧದಿಂದ ನೊಂದು ಶಶಿಕಲಾ ರಾತ್ರಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ