ನೇಣುಬಿಗಿದ ಸ್ಥಿತಿಯಲ್ಲಿ ಸಚಿವರ ಸೊಸೆಯ ಮೃತದೇಹ ಪತ್ತೆ - Mahanayaka
3:23 AM Wednesday 11 - December 2024

ನೇಣುಬಿಗಿದ ಸ್ಥಿತಿಯಲ್ಲಿ ಸಚಿವರ ಸೊಸೆಯ ಮೃತದೇಹ ಪತ್ತೆ

savitha
11/05/2022

ಭೋಪಾಲ್: ಮಧ್ಯಪ್ರದೇಶದ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಶಾಜಾಪುರದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

ಸವಿತಾ(22)  ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದು, ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಇಂದರ್ ಸಿಂಗ್ ಪರ್ನಾರ್ ಅವರ ಪುತ್ರ ದೇವರಾಜ್ ಸಿಂಗ್ ಜೊತೆ ಸವಿತ ವಿವಾಹವಾಗಿದ್ದರು. ಘಟನೆಯ ವೇಳೆ ದೇವರಾಜ್ ಸಿಂಗ್ ಮನೆಯಲ್ಲಿ ಇರಲಿಲ್ಲ ಎಂದು  ಹೇಳಲಾಗಿದೆ. ಉಳಿದ ಸದಸ್ಯರು ಮನೆಯಲ್ಲೇ ಇರುವಾಗ ಈ ಘಟನೆ ನಡೆದಿದೆ.

ಸದ್ಯ ಸವಿತಾ ಸಾವಿನ ಬಗ್ಗೆ ಪೊಲೀಸರು ಯಾವುದೇ ಮಾಹಿತಿಗಳನ್ನು ನೀಡಿಲ್ಲ. ಯಾವುದೇ ಸೂಸೈಡ್  ನೋಟ್ ಲಭ್ಯವಾಗಿಲ್ಲ ಎನ್ನಲಾಗಿದೆ. ಇನ್ನೂ ಈ ಘಟನೆಯು  ಸಾರ್ವಜನಿಕ ವಲಯದಲ್ಲಿ ನಾನಾ ಚರ್ಚೆಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದ ಪ್ರಮೋದ್ ಮುತಾಲಿಕ್

ಮಸೀದಿ, ಚರ್ಚ್, ದೇಗುಲಗಳಲ್ಲಿ ಮೈಕ್ ಬಳಕೆಗೆ ನಿಯಮ ರೂಪಿಸಲಾಗುತ್ತಿದೆ: ಸಚಿವ ಆನಂದ್ ಸಿಂಗ್

ರೈಲಿನಲ್ಲೂ ಲೌಡ್ ಸ್ಪೀಕರ್ ಗೆ ಕಂಟಕ! | ಲೌಡ್ ಸ್ಪೀಕರ್ ನಿಷೇಧಿಸಿದ ರೈಲ್ವೆ ಇಲಾಖೆ

ಕುತೂಹಲಕ್ಕೆ ಕಾರಣವಾದ ನವದೆಹಲಿಗೆ ಸಿಎಂ ಬೊಮ್ಮಾಯಿ ಭೇಟಿ!

ಕಾಂಗ್ರೆಸ್ ನಾಯಕನ ಪುತ್ರನ ವಿರುದ್ಧ ಅತ್ಯಾಚಾರದ ಆರೋಪ: ಮತ್ತೌಷಧಿ ನೀಡಿ ಯುವತಿಯ ಅತ್ಯಾಚಾರ

ಇತ್ತೀಚಿನ ಸುದ್ದಿ