ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ - Mahanayaka

ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

dampathi
21/02/2022

ಮಡಿಕೇರಿ: ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನ ಪೋನ್ನಂಪೇಟೆ ತಾಲೂಕಿನ ಬಿರುನಾಣಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಯುವರಾಜ್ (25) ಮತ್ತು ಪತ್ನಿ ಶಿಲ್ಪಾ (22) ಮೃತ ದಂಪತಿ. ಯುವರಾಜ್ ಅವರು ವನ್ಯಜೀವಿ ವಿಭಾಗದ ವ್ಯಾಪ್ತಿಯ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಡಗಿನ ಪೋನ್ನಂಪೇಟೆ ತಾಲೂಕಿನ ಬಿರುನಾಣಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಮೂಲದ ಇವರು ಕಳೆದ 10 ತಿಂಗಳ ಹಿಂದೆ ಮದುವೆಯಾಗಿದ್ದರು. ಬಿರುನಾಣಿಯ ಸಿ.ಸತ್ಯ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಕರ್ತವ್ಯ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ವೇಲ್‌ನಿಂದ ಬಾತ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಮನೆ ಮಾಲೀಕ ಸತ್ಯ ಅವರನ್ನು ಕರೆದು ಮೃತದೇಹವನ್ನು ಇಬ್ಬರು ಸೇರಿ ಇಳಿಸಿದ್ದಾರೆ.


Provided by

ಈ ಸಂದರ್ಭ ಸಂಬಂಧಿಕರಿಗೆ ದೂರವಾಣಿ ಕರೆಮಾಡಿ ವಿಷಯವನ್ನು ಯುವರಾಜ್ ತಿಳಿಸಿದ್ದಾನೆ. ಸ್ವಲ್ಪ ದೂರಲ್ಲೇ ಯುವರಾಜ್ ಸಹ ಬಾತ್ ರೂಮ್‌ಗೆ ಹೋಗಿ ಪತ್ನಿ ನೇಣು ಬಿಗಿದುಕೊಂಡಿದ್ದ ವೇಲ್‌ನಿಂದ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಶ್ರೀಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಂ ಗೂಂಡಾಗಳಿಂದ ಬಿಜೆಪಿ ಕಾರ್ಯಕರ್ತನ ಕೊಲೆ: ಸಚಿವ ಈಶ್ವರಪ್ಪ

ಮಾರಕಾಸ್ತ್ರಗಳಿಂದ ಕೊಚ್ಚಿ ಬಜರಂಗದಳದ ಕಾರ್ಯಕರ್ತನ ಬರ್ಬರ ಹತ್ಯೆ!

ವಡಾಪಾವ್ ತಿಂದು ಬಿಲ್ ಪಾವತಿಸದೇ ತೆರಳಿದ್ದ ಕೇಂದ್ರ ಸಚಿವರಿಗೆ ತೀವ್ರ ಮುಜುಗರ!

ಆಮ್ಲೆಟ್​ ಮಾಡಿಕೊಡಲಿಲ್ಲ ಎಂದು ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ

ಇತ್ತೀಚಿನ ಸುದ್ದಿ