ದಕ್ಷಿಣ ಕನ್ನಡ: ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು - Mahanayaka
11:19 AM Friday 19 - September 2025

ದಕ್ಷಿಣ ಕನ್ನಡ: ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು

puttur news
18/10/2021

ಪುತ್ತೂರು: ವೃದ್ಧ ದಂಪತಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಪುತ್ತೂರು(Puttur) ತಾಲೂಕಿನ ಬಡಗನ್ನೂರು ಗ್ರಾಮದ ಪಾದೆಕರ್ಯದಲ್ಲಿ ನಡೆದಿದೆ.

84 ವರ್ಷ ವಯಸ್ಸಿನ ಸುಬ್ರಹ್ಮಣ್ಯ ಭಟ್ ಹಾಗೂ 78 ವರ್ಷ ವಯಸ್ಸಿನ  ಶಾರದಾ ಭಟ್ ಆತ್ಮಹತ್ಯೆಗೆ ಶರಣಾಗಿರುವ ದಂಪತಿ ಎಂದು ತಿಳಿದು ಬಂದಿದೆ.  ಭಾನುವಾರ ರಾತ್ರಿ ದಂಪತಿ ಊಟದ ಬಳಿಕ ಮನೆಯ ಕೆಳ ಅಂತಸ್ತಿನ ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ. ಮೇಲಿನ ಮಹಡಿಯಲ್ಲಿ ಇವರ ಪುತ್ರ ಹಾಗೂ ಕುಟುಂಬ ಮಲಗಿದ್ದರು.

ಸೋಮವಾರ ಬೆಳಿಗ್ಗೆ ದಂಪತಿಯ ಪುತ್ರ ಎದ್ದು ನೋಡಿದಾಗ ದಂಪತಿಯು ಪ್ರತ್ಯೇಕ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಸಂಪ್ಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಪಡೆದು ಮನೆಗೆ ಬಂದ ಬಳಿಕ ಸಾವು!

ಉಪ ಚುನಾವಣೆ ಮುಗಿದ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ್ ಬೊಮ್ಮಾಯಿ

ಜಾತಿನಿಂದನೆ ಪ್ರಕರಣ: ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ಧಾರ್ಮಿಕ ಬಲಾತ್ಕಾರ:  ಚರ್ಚ್ ಗೆ ನುಗ್ಗಿ ದುರ್ನಡತೆ ತೋರಿದ ಬಿಜೆಪಿ ಪರಿವಾರ

ಭಾರೀ ಮಳೆ, ಭೂಕುಸಿತಕ್ಕೆ ಕೇರಳದಲ್ಲಿ 18 ಮಂದಿ ಬಲಿ: ಕೇರಳದಲ್ಲಿ ಇಂದು ಕೂಡ ರೆಡ್ ಅಲಾರ್ಟ್!

ಸಿಎಂ ಬೊಮ್ಮಾಯಿ ಅವರನ್ನು ನೋಡಲು ಬಂದ ಬಾಲಕನ ಮೇಲೆ ಪೊಲೀಸರಿಂದ ಹಲ್ಲೆ!

ಇತ್ತೀಚಿನ ಸುದ್ದಿ