ನೆರೆಮನೆಯ ವ್ಯಕ್ತಿಯಿಂದಲೇ 5 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ
ಮೊರೆನಾ: ನೆರೆಯ ಮನೆಯ ವ್ಯಕ್ತಿಯೋರ್ವ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಬ್ರೆಡ್ ತರಲೆಂದು 5 ವರ್ಷ ವಯಸ್ಸಿನ ಬಾಲಕಿ ತನ್ನ ಮನೆಯ ಸಮೀಪದ ಅಂಗಡಿಗೆ ತೆರಳಿದ್ದಳು. ಆದರೆ, ಬಾಲಕಿ ಅಂಗಡಿಗೆ ಹೋಗಿ ಒಂದೂವರೆ ಗಂಟೆಯಾದರೂ ವಾಪಸ್ ಬಾರದೇ ಇದ್ದುದರಿಂದ ಮನೆಯವರು ಆತಂಕಕ್ಕೀಡಾಗಿದ್ದು, ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಅಂಗಡಿ ಬಳಿಯಲ್ಲಿ ಹುಡುಕಾಡಿದ ಬಳಿಕ ಅಂಗಡಿಯ ಸಿಸಿ ಕ್ಯಾಮರವನ್ನು ಪರಿಶೀಲಿಸಿದ್ದು, ಈ ವೇಳೆ ಪಕ್ಕದ ಮನೆಯ ಚೋಟು ಥೋಮರ್ ಎಂಬಾತ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿರುವ ದೃಶ್ಯ ಕಂಡು ಬಂದಿದೆ.
ಈ ವೇಳೆ ಸ್ಥಳೀಯರು ಚೋಟು ಥೋಮರ್ ಮನೆಗೆ ನುಗ್ಗಿದ್ದು, ಬಾಲಕಿಯನ್ನು ತಕ್ಷಣವೇ ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಈ ವೇಳೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಇನ್ನೂ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ.