ಶಾಕಿಂಗ್ ನ್ಯೂಸ್: ನಸ್ಲೆ ಕಂಪೆನಿಯ ಶೇ.60ರಷ್ಟು ಉತ್ಪನ್ನ ಸಂಪೂರ್ಣ ಆರೋಗ್ಯಪೂರ್ಣವಲ್ಲ - Mahanayaka
10:17 AM Wednesday 5 - February 2025

ಶಾಕಿಂಗ್ ನ್ಯೂಸ್: ನಸ್ಲೆ ಕಂಪೆನಿಯ ಶೇ.60ರಷ್ಟು ಉತ್ಪನ್ನ ಸಂಪೂರ್ಣ ಆರೋಗ್ಯಪೂರ್ಣವಲ್ಲ

nestle products
02/06/2021

ನವದೆಹಲಿ: ಮ್ಯಾಗಿ ಸೇರಿದಂತೆ ಹಲವು ಜನಪ್ರಿಯ ಆಹಾರ ಹಾಗೂ ಪಾನೀಯಗಳ ತಯಾರಕ ಸಂಸ್ಥೆ ನಸ್ಲೆಯ ಆಂತರಿಕ ವರದಿಯೊಂದು ಇದೀಗ ಜನರನ್ನು ಬೆಚ್ಚಿಬೀಳಿಸಿದೆ. ನೆಸ್ಲೆ ತಯಾರಿಸುವ ಶೇ 60 ರಷ್ಟು ಆಹಾರ ಉತ್ಪನ್ನಗಳು ಆರೋಗ್ಯ ಪೂರ್ಣ ಆಹಾರದ ಮಟ್ಟವನ್ನು ಪೂರ್ಣಗೊಳಿಸುವುದಿಲ್ಲ ಎಂದು ಸ್ವತಃ ನೆಸ್ಲೆಯೇ ಹೇಳಿದೆ ಎಂದು ವರದಿಯಾಗಿದೆ.

ಕಂಪನಿಯ ಇತ್ತೀಚಿನ ವರದಿಯಲ್ಲಿ ಇದು ಉಲ್ಲೇಖವಾಗಿದೆ ಎಂದು ಬ್ರಿಟನ್ ಮೂಲದ ಫೈನಾನ್ಶಿಯಲ್ ಎಕ್ಸಪ್ರೆಸ್ ವರದಿ ಮಾಡಿದೆ. ಅಂದರೆ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಪೂರ್ಣವಲ್ಲ ಎಂಬುದು ಬಹಿರಂಗವಾಗಿದೆ.

ನಾವು ಎಷ್ಟೇ ಬದಲಾವಣೆ ಮಾಡಿಕೊಂಡರೂ ಕೆಲ ಆಹಾರ ಉತ್ಪನ್ನಗಳು ಆರೋಗ್ಯಕಾರಿಯಾಗಿರಲು ಸಾಧ್ಯವಿಲ್ಲ  ಎಂಬುದನ್ನು ನೆಸ್ಲೆ ಕಂಪನಿ ಒಪ್ಪಿಕೊಂಡಿದೆ. ನೆಸ್ಲೆ ತಯಾರಿಸುವ ಸಾಕುಪ್ರಾಣಿಗಳ ಆಹಾರ ಹಾಗೂ ಮೆಡಿಕಲ್ ನ್ಯೂಟ್ರಿಷನ್‌ ಮಾತ್ರ ಜಾಗತಿಕವಾಗಿ 3.5 ರಷ್ಟು ರೇಟಿಂಗ ಪಡೆದಿದ್ದು ಬಿಟ್ಟರೇ ಉಳಿದ ಪದಾರ್ಥಗಳು ರೇಟಿಂಗ್‌ ನಲ್ಲಿ ತುಂಬಾ ಹಿಂದೆ ಇವೆ ಎಂಬುದು ಉಲ್ಲೇಖವಾಗಿದೆ.

ಆಹಾರ ವಿಭಾಗದಲ್ಲಿ ಶೇ 70 ರಷ್ಟು ಉತ್ಪನ್ನಗಳು ಆರೋಗ್ಯಪೂರ್ಣ ಅಲ್ಲ. ಪಾನೀಯ ವಿಭಾಗದಲ್ಲಿ ಕಾಫಿ ಹೊರತುಪಡಿಸಿ ಶೇ 90 ರಷ್ಟು ಪಾನೀಯಗಳು ಆರೋಗ್ಯಪೂರ್ಣ ಅಲ್ಲ ಎಂಬುದು ಬಹಿರಂಗವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂಪೆನಿಯ ವಕ್ತಾರರು, ಇದೊಂದು ಆಂತರಿಕ ವರದಿಯಾಗಿದೆ. ಗ್ರಾಹಕರಿಗೆ ನಮ್ಮ ಉತ್ಪನ್ನಗಳ ಮೂಲಕ ಆರೋಗ್ಯಕರ ಹಾಗೂ ಪೋಷಕಾಂಶಗಳನ್ನು ಒಳಗೊಂಡ ತಿನಿಸುಗಳನ್ನು ನೀಡುವುದು ನಮ್ಮ ಗುರಿ ಎಂದು ಕಂಪೆನಿ ಹೇಳಿದೆ.

ಇತ್ತೀಚಿನ ಸುದ್ದಿ