ಭಯದ ಸುಳಿಗೆ ಬಿದ್ದ ಅಹಂಕಾರಿ ಪ್ರಧಾನಿ: ಡ್ರೋನ್ ದಾಳಿ ಭೀತಿಯಿಂದ ಬಂಕರ್ ನಲ್ಲಿ ಇಸ್ರೇಲ್ ಪ್ರಧಾನಿ ವಾಸ! - Mahanayaka

ಭಯದ ಸುಳಿಗೆ ಬಿದ್ದ ಅಹಂಕಾರಿ ಪ್ರಧಾನಿ: ಡ್ರೋನ್ ದಾಳಿ ಭೀತಿಯಿಂದ ಬಂಕರ್ ನಲ್ಲಿ ಇಸ್ರೇಲ್ ಪ್ರಧಾನಿ ವಾಸ!

11/11/2024

ಡ್ರೋನ್ ದಾಳಿಯ ಭೀತಿಯಿಂದ ಕಂಗಾಲಾಗಿರುವ ಇಸ್ರೇಲಿನ ಪ್ರಧಾನಿ ನೆತನ್ಯಾಹು ಭಾರೀ ಭದ್ರತೆ ಇರುವ ಬಂಕರ್ ಗೆ ತನ್ನ ವಾಸವನ್ನು ಬದಲಾಯಿಸಿದ್ದಾರೆ ಎಂದು ವರದಿಯಾಗಿದೆ. ಪ್ರಧಾನಿ ಕಚೇರಿಯ ಕೆಳಗಡೆ ಇರುವ ಸುರಕ್ಷಿತ ಬಂಕರ್ ನ ಒಳಗೆ ನೆತನ್ಯಾಹು ವಾಸಿಸುತ್ತಿದ್ದಾರೆ ಎಂದು ಇಸ್ರೇಲ್ ನ ಚಾನೆಲ್ ಹನ್ನೆರಡು ವರದಿ ಮಾಡಿದೆ. ನೆತನ್ಯಾಹು ಅವರ ದೈನಂದಿನ ಸಭೆಯೂ ಸೇರಿದಂತೆ ಎಲ್ಲವೂ ಈ ಬಂಕರ್ ನ ಒಳಗೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.

ಸಾಮಾನ್ಯವಾಗಿ ಪ್ರಧಾನಮಂತ್ರಿ ಕಚೇರಿಯ ಮೇಲೆ ಇರುವ ಕೊಠಡಿಯಲ್ಲಿ ಸಭೆ ಸೇರಲಾಗುತ್ತಿತ್ತು. ಆದರೆ ಸುರಕ್ಷತೆಯ ಕಾರಣದಿಂದ ಈ ಎಲ್ಲ ಸಭೆಗಳನ್ನು ಬಂಕರಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚು ಸಮಯ ಒಂದೇ ಕಡೆ ನಿಲ್ಲದೆ ಬೇರೆ ಬೇರೆ ಕಡೆ ಚಲಿಸುತ್ತಿರಬೇಕು ಎಂದು ಅವರಿಗೆ ನಿರ್ದೇಶನ ನೀಡಲಾಗಿದೆ.

ಅಕ್ಟೋಬರ್ 25ರಂದು ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬಳಿಕ ನೆತನ್ಯಾಹು ಮತ್ತು ರಕ್ಷಣಾ ಸಚಿವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇರಾನಿನಿಂದ ತಿರುಗೇಟನ್ನು ನಿರೀಕ್ಷಿಸಿ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಇರಾನ್ ಮೇಲೆ ಆಕ್ರಮಣ ನಡೆಸುವ ವೇಳೆ ನೆತನ್ಯಾಹು ಮತ್ತು ರಕ್ಷಣಾ ಸಚಿವರು ಬಂಕರ್ ನಲ್ಲಿ ಅಡಗಿದ್ದರು ಎಂದು ತಿಳಿದು ಬಂದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ